ಎಂ.ಕೆ.ಹೆಗಡೆ
ಸುದ್ದಿ, ಬೆಳಗಾವಿ -ಈಗೇನಿದ್ದರೂ ಡಿಜಿಟಲ್ ಯುಗ. ಇಂದಿನ ಸುದ್ದಿಗಾಗಿ ನಾಳೆ ಬೆಳಗ್ಗೆ ಪತ್ರಿಕೆ ಬರೋವರೆಗೆ ಕಾಯುವ ಕಾಲ ಮುಗಿದುಹೋಗಿದೆ. ಇರೋ ಕೆಲಸವನ್ನೆಲ್ಲ ಬಿಟ್ಟು ಟಿವಿ ನೋಡುತ್ತ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯೂ ಇಂದಿಲ್ಲ. ಸುದ್ದಿಗಾಗಿ ದುಡ್ಡು ಕೊಡುವ ಕಾಲವೂ ಇದಲ್ಲ. ಕೈಯಲ್ಲಿರುವ ಮೊಬೈಲ್ ನಲ್ಲೇ ಕ್ಷಣ ಕ್ಷಣದ ಸುದ್ದಿ ಬಂದು ಬೀಳುವ ಕಾಲವಿದು. ದಿನವಲ್ಲ, ಗಂಟೆಯಲ್ಲ, ನಿಮಿಷವಲ್ಲ, ಸೆಕೆಂಡಿಗೂ ಈಗ ಬೆಲೆ ಬಂದಿದೆ.
ಇಂತಹ ತೀವ್ರ ಸ್ಪರ್ಧಾತ್ಮಕ ಸಂದರ್ಭದಲ್ಲಿ, ಬದಲಾದ ಸನ್ನಿವೇಶದಲ್ಲಿ ನಿಮ್ಮ ಆರಂಭವಾಗಿದೆ. 2018ರ ನವೆಂಬರ್ 21ರಂದು ತನ್ನ ಮೊದಲ ಸುದ್ದಿಯನ್ನು ಭಿತ್ತರಿಸುವ ಮೂಲಕ ಅಧಿಕೃತವಾಗಿ ಆರಂಭವಾಯಿತು. ಹಾಗಾಗಿ ನವೆಂಬರ್ ತಿಂಗಳ ಪೂರ್ತಿ ಮೊದಲ ಹುಟ್ಟುಹಬ್ಬದ ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.
ಒದು ವರ್ಷ ಕಳೆದಿದ್ದೇ ಗೊತ್ತಾಗದಷ್ಟು ವೇಗವಾಗಿ ದಿನಗಳು ಕಳೆದವು. ಪ್ರತಿ ದಿನ ಸರಾಸರಿ 15 ಸುದ್ದಿಗಳಂತೆ ಈವರೆಗೆ ಸುಮಾರು 5 ಸಾವಿರಕ್ಕಿಂತ ಹೆಚ್ಚು ಸುದ್ದಿಗಳನ್ನು ನಿಮ್ಮ ಪಾದಕ್ಕೆ ಅರ್ಪಿಸಿದೆ. ಹಲವಾರು ವಿಶೇಷ ವರದಿಗಳನ್ನು, ವೈವಿಧ್ಯಮಯ ಲೇಖನಗಳನ್ನು ನೀಡಿದೆ.
ಓದುಗರಾದ ನೀವು ಯನ್ನು ಅತ್ಯಂತ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದೀರಿ, ಅಪ್ಪಿಕೊಂಡಿದ್ದೀರಿ. ಪ್ರೀತಿಯಿಂದ ಬೆಳೆಸಿದ್ದೀರಿ. ಸಲಹೆ, ಸೂಚನೆಗಳನ್ನು ಕೊಟ್ಟಿದ್ದೀರಿ. ನಿಮ್ಮ ಸುದ್ದಿ ಹಾಕದಿದ್ದಾಗ ಕೋಪದಿಂದ ಬೈಯ್ದಿದ್ದೀರಿ. ಯಾರ್ಯಾರಿಂದಲೋ ಒತ್ತಡ ಹಾಕಿಸಿದ್ದೀರಿ. ನಿಮ್ಮ ಪ್ರೀತಿಯ ಕೂಸಾಗಿರುವುದರಿಂದ ಬಯ್ಯುವ ಹಕ್ಕು ನಿಮಗಿದೆ. ಆದರೆ ಅಂಬೆಗಾಲಿಕ್ಕುತ್ತಿರುವ ಸಂದರ್ಭದಲ್ಲಿ, ಗೋಡೆ ಹಿಡಿದು ನಡೆಯಲು ಕಲಿಯುವ ಸಂದರ್ಭದಲ್ಲಿ ಎಡುವುವುದು, ಬೀಳುವುದು ಸಹಜ. ಎತ್ತಿ, ಮುದ್ದಾಡಿ ಮತ್ತೆ ನಡೆಸುವುದು ನಿಮ್ಮದೇ ಕೆಲಸ, ಆ ಕೆಲಸವನ್ನೂ ಮಾಡುತ್ತಿದ್ದೀರಿ.
ಈ ಅಲ್ಪಾವಧಿಯಲ್ಲಿ ಮಾಡಿದ ಕೆಲಸವನ್ನೂ ನಿಮ್ಮ ಮುಂದಿಡುತ್ತಿದ್ದೇನೆ. ಸರಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಲು ಹೊರಟಾಗ ನಿಮ್ಮ ಸಂಘಟಿಸಿದ್ದ ಪ್ರತಿಭಟನೆ ಬೆಳಗಾವಿಯ ಇತಿಹಾಸದಲ್ಲೇ ದಾಖಲೆ ಬರೆಯಿತು. ಸಂಸದರು, ಶಾಸಕರು, ಮಠಾಧೀಶರು, ಕನ್ನಡ ಸಂಘಟನೆಗಳು, ವಿದ್ಯಾರ್ಥಿಗಳು, ಸಾಹಿತಿಗಳು, ಉದ್ಯಮಿಗಳು, ಪತ್ರಕರ್ತರು, ಜನಸಾಮಾನ್ಯರು ಕೈ ಜೋಡಿಸಿದರು. 12 ಸಾವಿರಕ್ಕೂ ಹೆಚ್ಚು ಜನರು ಸೇರಿ ಸರಕಾರದ ನಿಲುವನ್ನು ವಿರಧಿಸಿದರು. ಹೋರಾಟಕ್ಕೆ ಮಣಿದ ಸರಕಾರ ತನ್ನ ನಿರ್ಧಾರವನ್ನು ಕೈಬಿಟ್ಟಿತು.
ಈ ರೀತಿ ಹಲವಾರು ಜನವಿರೋಧಿ ಯೋಜನೆಗಳು ಜಾರಿಯಾದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಜನರನ್ನು ಸಂಘಟಿಸಿ ಹೋರಾಟಕ್ಕಿಳಿದಿದೆ, ಯಶಸ್ವಿಯೂ ಆಗಿದೆ. ಅನೇಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ, ಪರಿಹಾರ ಒದಗಿಸಿದೆ. ಜನರ ಮನಸ್ಸಿನ ತುಡಿತಗಳನ್ನು ಬಿಚ್ಚಿಟ್ಟಿದೆ. ಇತಿಹಾಸದಲ್ಲೇ ಎಂದೂ ಕಾಣದ ಪ್ರವಾಹ ಬಂದ ಸಂದರ್ಭದಲ್ಲಿ ಜನರ ಸಂಕಷ್ಟಗಳನ್ನು ಕ್ಷಣ ಕ್ಷಣವೂ ಅಧಿಕಾರಿಗಳ, ಜನಪ್ರತಿನಿಧಿಗಳ ಮುಂದಿಟ್ಟು ಸ್ಪಂದಿಸುವ ಕೆಲಸ ಮಾಡಿದೆ. ಜನಪ್ರತಿನಿಧಿಗಳು ಮಾಡುತ್ತಿರುವ, ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮತದಾರರ ಮುಂದಿಟ್ಟಿದೆ. ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿಸಿ, ಪ್ರೋತ್ಸಾಹಿಸಿದೆ.
ಈ ಎಲ್ಲ ಕೆಲಸಗಳನ್ನೂ ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತ ಬಂದಿದೆ, ಮುಂದೆಯೂ ಇದೇ ರೀತಿ ಮುಂದುವರಿಸಲಿದೆ. ಅನೇಕರು ಸುದ್ದಿಗಳನ್ನು ಕಳುಹಿಸಿ ಬೆಳೆಸಿದ್ದೀರಿ. ಹಲವರು ಲೇಖನಗಳನ್ನು ನೀಡಿ, ಜಾಹಿರಾತುಗಳನ್ನು ನೀಡಿ ಸಹಕರಿಸಿದ್ದೀರಿ. ಅಲ್ಪಾವಧಿಯಲ್ಲೇ ಮುಂಚೂಣಿ ಮಾಧ್ಯಮಗಳ ಸಾಲಿನಲ್ಲಿ ಯನ್ನು ತಂದು ನಿಲ್ಲಿಸಿದ್ದೀರಿ. ನಿಮ್ಮೆಲ್ಲರ ಋುಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಆದರೆ ಈಗಷ್ಟೆ ನಡೆಯಲು ಆರಂಭಿಸಿರುವ ಕೂಸನ್ನು ಇನ್ನಷ್ಟು ಬೆಳೆಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಅದನ್ನು ಖಂಡಿತ ನೀವು ಮರೆಯುವುದಿಲ್ಲ ಎನ್ನುವ ನಂಬಿಕೆ ಇದೆ. ಇನ್ನೂ ಸಕಷ್ಟು ಬೆಳೆಯಬೇಕಿದೆ. ಆದರೆ, ಜಾಹಿರಾತು ಹೊರತುಪಡಿಸಿದರೆ ಗೆ ಬೇರೆ ಆದಾಯದ ಮೂಲವಿಲ್ಲ. ಹಾಗಾಗಿ ಜಾಹಿರಾತುಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯ ಸುದ್ದಿ ವಾಹಿನಿಯನ್ನು ಇನ್ನಷ್ಟು ಬೆಳೆಸಲು ವಿನಂತಿಸುತ್ತೇನೆ. ಪ್ರಥಮ ವಾರ್ಷಿಕೋತ್ಸವದ ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಜೊತೆಗೆ ಸರ್ವ ರೀತಿಯಲ್ಲೂ ಯನ್ನು ಬೆಳಸಲು ಕೈ ಜೋಡಿಸಬೇಕೆನ್ನುವ ಕಳಕಳಿಯ ಪ್ರಾರ್ಥನೆಯನ್ನೂ ಮಾಡುತ್ತಿದ್ದೇನೆ.
-ಎಂ.ಕೆ.ಹೆಗಡೆ
ಪ್ರಧಾನ ಸಂಪಾದಕ
ಸಂಪರ್ಕ – 8197712235, [email protected], [email protected], [email protected], [email protected]
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ