Belagavi NewsBelgaum NewsPolitics

*ಬೆಳಗಾವಿಯಲ್ಲಿ ಮತ್ತೊಂದು ಮಗು ಮಾರಾಟ ಕೇಸ್: ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇತ್ತೀಚೆಗೆ ಮಕ್ಕಳ ಮಾರಾಟ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹುಕ್ಕೇರಿ ತಾಲ್ಲೂಕಿನ ಸುಲ್ತಾನಪುರದ ಐದು ವರ್ಷದ ಗಂಡು ಮಗುವನ್ನು ಮಾರಿದ್ದ ಪ್ರಕರಣ ಭೇದಿಸಿದ ಹುಕ್ಕೇರಿ ಠಾಣೆ ಪೊಲೀಸರು, ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲ್ಲೂಕಿನ ಮಾದ್ಯಾಳದ ಸಂಗೀತಾ ಹಮ್ಮನ್ನವರ, ರತ್ನಾಗಿರಿ ಜಿಲ್ಲೆಯ ಚಿಪಳುನ ತಾಲ್ಲೂಕಿನ ನಿವಳಿಯ ಮೋಹನ ತಾವಡೆ ಮತ್ತು ಆತನ ಪತ್ನಿ ಸಂಗೀತಾ ತಾವಡೆ ಬಂಧಿತರು. ಇನ್ನಿಬ್ಬರ ಪತ್ತೆಗೆ ಶೋಧ ಮುಂದುವರೆದಿದೆ.

ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.ಸುಲ್ತಾನಪುರದ ಅರ್ಚನಾ ಮಗದುಮ್ಮ ಹಾಗೂ ರಾಜು ಮಗದುಮ್ಮ ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಅರ್ಚನಾ ಅವರಿಗೆ ಈ ಹಿಂದೆ ಜನಿಸಿದ್ದ ಮಗುವಿನ ಆರೋಗ್ಯ ಸರಿ ಇರಲಿಲ್ಲ. ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಸಂಗೀತಾ ಹಮ್ಮನ್ನವರ ಆ ಮಗುವನ್ನು ಕರೆದೊಯ್ದು, ಮೋಹನ ತಾವಡೆ, ಸಂಗೀತಾ ತಾವಡೆ ಮೂಲಕ ರತ್ನಾಗಿರಿ ಜಿಲ್ಲೆಯ ನಂದಕುಮಾರ ಮತ್ತು ನಂದಿನಿ ಡೋರಲೇಕರ ದಂಪತಿಗೆ ₹3.50 ಲಕ್ಷಕ್ಕೆ ಮಾರಿದ್ದಳು. ಮಗುವಿನ ತಾಯಿ ಜನವರಿ 20ರಂದು ದಾಖಲಿಸಿದ ದೂರು ಆಧರಿಸಿ ತನಿಖೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Home add -Advt

Related Articles

Back to top button