Latest

ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ನಟ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಮಲಯಾಳಂ ಖ್ಯಾತ ನಟ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ನಟ ವಿಜಯ್ ಬಾಬು ನನಗೆ ಬಲವಂತದಿಂದ ಕಿಸ್ ಮಾಡಲು ಮುಂದಾಗಿದ್ದಾರೆ ಎಂದು ಮಹಿಳೆಯೊಬ್ಬರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ವಿಜಯ್ ಬಾಬು ತುಂಬಾ ಡ್ರಿಂಕ್ಸ್ ಮಾಡುತ್ತಾರೆ. ಅಂದು ನನಗೂ ಕುಡಿಯುವಂತೆ ಆಫರ್ ಮಾಡಿದ್ದರು. ನಾನು ನಿರಾಕರಿಸಿದೆ. ಏಕಾಏಕಿ ನನಗೆ ಮುತ್ತಿಕ್ಕಲು ಬಂದಿದ್ದಾರೆ. ನಾನು ಅವರನ್ನು ದೂರ ತಳ್ಳಿದೆ, ಒಂದೇ ಒಂದು ಕಿಸ್ ಎಂದು ಬೇಡಿಕೆ ಇಟ್ಟರು ಅವರಿಂದ ತಪ್ಪಿಸಿಕೊಂಡು ಬಂದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ವಿಜಯ್ ಬಾಬುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಾದರೂ ಆರೋಪಿ ನಟನನ್ನು ಬಂಧಿಸದ ವಿರುದ್ಧ ಎರ್ನಾಕುಲಂ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡಿದ್ದ ನಟ ವಿಜಯ್ ಬಾಬು, ನಟಿ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ.
ಚಿನ್ನ-ಬೆಳ್ಳಿ ದರ ಇಂದು ಯಾವ ನಗರದಲ್ಲಿ ಎಷ್ಟು?

Related Articles

Back to top button