Kannada NewsKarnataka News

ಬೆಳಗಾವಿಯಲ್ಲಿ ಮತ್ತೊಂದು ಕೊರೋನಾ ಸೋಂಕು; ಬಾಗಲಕೋಟೆಯಲ್ಲಿ ಮೂವರು ಮಕ್ಕಳಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 191ಕ್ಕೇರಿದ್ದು, 6 ಜನರು ಸಾವನ್ನಪ್ಪಿದ್ದಾರೆ.

ಇಂದು ಬಿಡುಗಡೆಯಾಗಿರುವ ಮೀಡಿಯಾ ಬುಲೆಟಿನ್ ಪ್ರಕಾರ ಬೆಳಗಾವಿಯ 50 ವರ್ಷದ ವ್ಯಕ್ತಿಗೆ ಹಾಗೂ ಬಾಗಲಕೋಟೆಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.

ಬೆಳಗಾವಿ ಹಿರೇಬಾಗೇವಾಡಿಯ 128ನೇ ನಂಬರ್ ಸೋಂಕಿತನ 50 ವರ್ಷದ ತಂದೆಗೆ ಸೋಕಿರುವುದು ದೃಷಪಟ್ಟಿದೆ. 128ನೇ ನಂಬರ್ ಸೋಂಕಿತ ನಿಜಾಮುದ್ದೀನ್ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದಿದ್ದಾತ

ಇದೀಗ ಬೆಳಗಾವಿ ನಗರದಲ್ಲಿ ನಾಲ್ಕು ಹಾಗೂ ಕುಡಚಿಯಲ್ಲಿ ನಾಲ್ವರಿಗೆ ಕೊರೋನಾ ದೃಢಪಟ್ಟಂತಾಗಿದೆ. ಇವರೆಲ್ಲ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಲಾಗುತ್ತಿದೆ.

Home add -Advt

ಬಾಗಲಕೋಟೆಯಲ್ಲಿ ಓರ್ವ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡಿದೆ. 165ರ ಸಂಖ್ಯೆ ಸೋಂಕಿತ ಮಹಿಳೆಯಿಂದ 9, 13, 4 ವರ್ಷದ ಮಕ್ಕಳು ಸೇರಿದಂತೆ ಮೂವರು ಮಕ್ಕಳಿಗೆ ಸೋಂಕು ತಗುಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button