ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿರುವ ಕೆಲವೇ ಗಂಟೆಯಲ್ಲಿ ಮತ್ತೊಂದು ಗುಡ್ಡ ಕುಸಿತವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಆತಂಕ ಮುಂದುವರಿದಿದೆ. ಗೋಕರ್ಣ ಬಳಿಯ ರಾಮತೀರ್ಥ ದೇವಸ್ಥಾನದ ಹಿಂಭಾಗದ ಬಳಿ ಬೆಳ್ಳಂ ಬೆಳಗ್ಗೆ ಗುಡ್ಡ ಕುಸಿದಿದೆ. ದೇವಸ್ಥಾನದಲ್ಲಿ ಯಾರೂ ಇಲ್ಲದ ಬೆಳಗಿನ ಜಾವ ಗುಡ್ಡ ಕುಸಿದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಸಮುದ್ರ ತೀರದಲ್ಲಿರುವ ರಾಮತೀರ್ಥದ ರಾಮದೇವಸ್ಥಾನದ ಬಳಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದುಬಿದ್ದಿದೆ. ಸ್ವಲ್ಪದರಲ್ಲಿಯೇ ದೇವಸ್ಥಾನಕ್ಕೆ ಭಾರೀ ಹಾನಿಯಾಗುವುದು ತಪ್ಪಿದೆ. ಕುಡಿಯುವ ನೀರನ್ನು ಸಂಗ್ರಹಿಸಲು ಮಾಡಿದ ನೀರಿನ ಟ್ಯಾಂಕ್, ತಗಡಿನ ಚಾವಣಿ ಸಂಪೂರ್ಣ ನೆಲೆಕಚ್ಚಿದ್ದು ಗುಡ್ಡದ ಮೇಲೆ ಕಲ್ಲುಗಣಿ ಕೊರೆಯುತ್ತಿರುವುದೇ ಕುಸಿತವಾಗಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ