
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲಾಕ್ ಡೌನ್ ಮಾದರಿಯಲ್ಲಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯಸರಕಾರದ ನಡೆಯಿಂದ ಉಂಟಾಗಿರುವ ಗೊಂದಲಕ್ಕೆ ಸ್ಪಷ್ಟನೆ ನೀಡಿ ಮತ್ತು ಕೆಲವು ಮಾರ್ಪಾಡು ಮಾಡಿ ಹೊಸ ಮಾರ್ಗಸೂಚಿ ಪ್ರಕಟಿಸಲು ಸರಕಾರ ನಿರ್ಧರಿಸಿದೆ.
ಇನ್ನು ಕೆಲವೇ ಹೊತ್ತಿನಲ್ಲಿ ಹೊಸ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಲಿದೆ.
ನಿನ್ನೆ ಸಂಜೆ ಪ್ರಕಟಿಸಿರುವ ಮಾರ್ಗಸೂಚಿ ಇಂದು ಬೆಳಗ್ಗೆ ಜಾರಿಯಾಗುವ ವೇಳೆಗೆ ಭಾರಿ ಗೊಂದಲಕ್ಕೆ ಕಾರಣವಾಗಿತ್ತು. ಅದು ಸಾರ್ವಜನಿಕರಿಗೆ ಸರಿಯಾಗಿ ತಲುಪಿರಲಿಲ್ಲ. ಏಕಾ ಏಕಿ ಪೊಲೀಸರು ಬಂದು ಅಂಗಡಿ ಮುಚ್ಚಿಸಲು ಹೊರಟಾಗ ಗೊಂದಲ ಉಂಟಾಗಿತ್ತು.
ಇದೀಗ ಸರಕಾರ ಪರಿಷ್ಕೃತ ಮತ್ತು ಕೆಲವು ಸ್ಪಷ್ಟನೆಗಳೊಂದಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಅದು ಹೊರಬೀಳಲಿದೆ.
ಸರಕಾರದಿಂದ ದಿಢೀರ್ ಲಾಕ್ ಡೌನ್ ಮಾದರಿ ಹೊಸ ಮಾರ್ಗಸೂಚಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ