
ಸಚಿವ ಸುರೇಶ ಕುಮಾರ ತಮ್ಮ ಫೇಸ್ ಬುಕ್ ನಲ್ಲಿ ಆದೇಶವನ್ನು ಅಪ್ ಲೋಡ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಾಳೆಯಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ 2ನೇ ಪರಿಷ್ಕೃತ ಆದೇಶ ಹೊರಡಿಸಿದೆ.
ಮೊದಲ ಆದೇಶದಲ್ಲಿ ಲಾಕ್ ಡೌನ್ ಇರುವ 11 ಜಿಲ್ಲೆಗಳ ಶಿಕ್ಷಕರು ಶಾಲೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ತಿಳಿಸಲಾಗಿತ್ತು.
ಇದೀಗ ಮತ್ತೊಂದು ಆದೇಶದಲ್ಲಿ, ಲಾಕ್ ಡೌನ್ ತೆರವುಗೊಳಿಸಲಾಗಿರುವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಆದರೆ ಲಾಕ್ ಡೌನ್ ಇರುವ ಜಿಲ್ಲೆಯಲ್ಲಿ ಸಧ್ಯ ವಾಸಿಸುತ್ತಿರುವವರಿಗೆ ಕೂಡ ಜೂನ್ 21ರ ವರಗೆ ಶಾಲೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.
ಶಿಕ್ಷಕರು ಸಧ್ಯ ಇರುವ ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದಲ್ಲಿ ಅಂತವರು ತಾವು ಕೆಲಸ ನಿರ್ವಹಿಸುವ ಜಿಲ್ಲೆಗೆ ಸಂಚಾರ ಮಾಡಲು ಬಸ್ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ತೊಂದರೆಯಾಗುವ ಹಿನ್ನೆಲೆಯಲ್ಲಿ ಇಲಾಖೆ ಈ ವಿನಾಯಿತಿ ನೀಡಿದೆ.
ಸಚಿವ ಸುರೇಶ ಕುಮಾರ ತಮ್ಮ ಫೇಸ್ ಬುಕ್ ನಲ್ಲಿ ಆದೇಶವನ್ನು ಅಪ್ ಲೋಡ್ ಮಾಡಿದ್ದಾರೆ.
ಮಂಗಳವಾರ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಧ್ಯಕ್ಕೆ ಎಲ್ಲ ಶಿಕ್ಷಕರಿಗೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕೆಂದು ಕೋರುವವರಿದ್ದಾರೆ. ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ಶಿಕ್ಷಕರ ಬೆಂಬಲಕ್ಕೆ ನಿಂತ ನೌಕರರ ಸಂಘ: ಸಿಎಂ ಜೊತೆ ನಾಳೆ ಚರ್ಚೆ – ಷಡಕ್ಷರಿ ಭರವಸೆ