Kannada NewsKarnataka NewsLatest

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷಸ್ಥಾನದಿಂದ ರಮೇಶ ಕತ್ತಿ ಪದಚ್ಯುತಿಗೆ ಯತ್ನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ವಿಧಾನಪರಿಷತ್ ಚುನಾವಣೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ವಾರ ಕಳೆಯುವ ಮುನ್ನವೇ ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ.

ಪ್ರತಿಷ್ಠಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ರಮೇಶ ಕತ್ತಿ ಕೆಳಗಿಳಿಸುವ ಯತ್ನ ಆರಂಭವಾಗಿದ್ದು, 10 ನಿರ್ದೇಶಕರು ಆಡಳಿತ ಮಂಡಲಿ ಸಭೆಗೆ ಗೈರಾಗುವ ಮೂಲಕ ಸಂದೇಶ ರವಾನಿಸಿದ್ದಾರೆ.

 

ಪ್ರತಿಷ್ಠಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ರಮೇಶ ಕತ್ತಿ ಕೆಳಗಿಳಿಸುವ ಯತ್ನ ಆರಂಭವಾಗಿದ್ದು, 10 ನಿರ್ದೇಶಕರು ಆಡಳಿತ ಮಂಡಲಿ ಸಭೆಗೆ ಗೈರಾಗುವ ಮೂಲಕ ಸಂದೇಶ ರವಾನಿಸಿದ್ದಾರೆ.

ಶನಿವಾರ ಮಧ್ಯಾಹ್ನ ೧೨ ಗಂಟೆಯಿಂದ ೩ ಗಂಟೆಯವರೆಗೆ ಆಡಳಿತ ಮಂಡಳಿಯ ಸಭೆ ನಿಗದಿಯಾಗಿತ್ತು. ಆದರೆ ಕೇವಲ ೫ ಜನರು ಮಾತ್ರ ಇದರಲ್ಲಿ ಪಾಲ್ಗೊಂಡಿದ್ದರು. ಸಭೆಯ ಕೋರಂಗೆ ಕನಿಷ್ಠ ೯ ಜನ ನಿರ್ದೇಶಕರ ಅವಶ್ಯಕತೆ ಇತ್ತು. ಆದರೆ ಕೇವಲ ಐದು ನಿರ್ದೇಶಕರು ಹಾಜರಾಗಿದ್ದರು. ಆದರೆ ಕೋರಂ ಇಲ್ಲದೆಯೇ ಸಭೆ ನಡೆಸಲಾಗುತ್ತಿದ್ದು, ಸಭೆಯನ್ನು ಮುಂದೂಡಬೇಕು ಎಂದು ಬೇರೆ ಐವರು ಸದಸ್ಯರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳಿಗೆ ಪತ್ರ ಕೊಟ್ಟಿದ್ದಾರೆ.

ರಮೇಶ ಕತ್ತಿ ಅವರು ಕರೆದ ಸಭೆಗೆ ಕೇವಲ ೫ ಜನ ನಿರ್ದೇಶಕರು ಮಾತ್ರ ಭಾಗವಹಿಸಿದ್ದಾರೆ. ಇನ್ನುಳಿದ ೧೦ ಜನ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿಲ್ಲ. ಇಷ್ಟಾಗಿಯೂ ಕೇವಲ ೫ ಜನರನ್ನು ಇಟ್ಟುಕೊಂಡು ಸಭೆ ನಡೆಸಿರುವುದು ಕಾನೂನು ಬಾಹೀರವಾಗಿದೆ. ಕೋರಂ ಇಲ್ಲದ ಈ ಸಭೆಯಲ್ಲಿ ಯಾವುದೇ ವಿಷಯಗಳನ್ನು ಪಾಸು ಮಾಡದೇ ಸಭೆಯನ್ನು ಮುಂದೂಡುವಂತೆ ಐವರು ನಿರ್ದೇಶಕರು ಲಿಖಿತವಾಗಿ ಆಗ್ರಹಿಸಿದ್ದಾರೆ.
ಶನಿವಾರದಂದು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ೧೬ ಜನರ ಪೈಕಿ ಕೇವಲ ೫ ಜನರು ಪಾಲ್ಗೊಂಡಿದ್ದಾರೆ. ಇದರಲ್ಲಿ ರಮೇಶ ಕತ್ತಿ, ಅಣ್ಣಾಸಾಬ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಸತೀಶ ಕಡಾಡಿ, ಶಿವಾನಂದ ಡೋಣಿ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ.

ಇನ್ನುಳಿದ ಆನಂದ ಮಾಮನಿ, ಲಕ್ಷ್ಮಣ ಸವದಿ, ಅರವಿಂದ ಪಾಟೀಲ ಮತ್ತು ಪಂಚನಗೌಡ ದ್ಯಾಮನಗೌಡರ ಅವರು ಸಭೆಯಲ್ಲಿ ಕೆಲ ಕಾರಣಗಳಿಂದ ಭಾಗವಹಿಸಿಲ್ಲ. ಜೊತೆಗೆ ನಾವು ಸಹ ನಮ್ಮ ೬ ಜನ ಸಂಗಡಿಗ ನಿರ್ದೇಶಕರೊಂದಿಗೆ ಈ ಸಭೆಯಲ್ಲಿ ಭಾಗಿಯಾಗಿಲ್ಲವೆಂದು ಅತೃಪ್ತ ಗುಂಪಿನ ಸುಭಾಸ ಢವಳೇಶ್ವರ ಅವರು ಹೇಳಿದ್ದಾರೆ.

ಅಧ್ಯಕ್ಷ ರಮೇಶ ಕತ್ತಿ ಅವರು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರೊಂದಿಗೆ ಕೂಡಿಕೊಂಡು ನಿರ್ದೇಶಕರ ಮನೆಗಳಿಗೆ ಹೋಗಿ ಠರಾವು ಪುಸ್ತಕಕ್ಕೆ ಸಹಿ ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಭೆ ಕಾನೂನು ಬಾಹೀರವಾಗಿದ್ದು, ಕೂಡಲೇ ಈ ಸಭೆಯನ್ನು ಮುಂದೂಡಬೇಕು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಯಾವುದೇ ಕಾರಣಕ್ಕೂ ಪಾಸು ಮಾಡುವಂತಿಲ್ಲವೆಂದು  ಎಚ್ಚರಿಕೆ ನೀಡಿದ್ದಾರೆ.

ರಮೇಶ ಕತ್ತಿ ವಿರುದ್ಧ ನಿರ್ದೇಶಕರುಗಳೇ ಬಂಡಾಯವೆದ್ದಿದ್ದಾರೆ. ನಿನ್ನೆಯ ಸಭೆಯಲ್ಲಿ ಕೇವಲ ೫ ಜನರು ಪಾಲ್ಗೊಂಡಿದ್ದು,  ಸಭೆಯನ್ನು ರದ್ದುಪಡಿಸಲಾಗಿದೆ. ಸಭೆಯನ್ನು ಮತ್ತೆ ಕರೆಯುತ್ತೇವೆ ಎಂದು ನಮಗೆ ತಿಳಿಸಲಾಗಿತ್ತು.

ಆದರೆ, ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳ ಮನೆಗಳಿಗೆ ಹೋಗಿ ಠರಾವು ಪುಸ್ತಕಗಳಿಗೆ ಸಹಿ ಮಾಡಿಸುತ್ತಿದ್ದಾರೆ. ಸಭೆ ಮುಂದೂಡಲಾಗಿದೆ ಎಂದು ಹೇಳಿಕೊಳ್ಳುತ್ತಿರುವ ಬ್ಯಾಂಕಿನ ಅಧ್ಯಕ್ಷರು ಮತ್ತೆ ಸಹಿ ಮಾಡಿಸುತ್ತಿರುವುದನ್ನು ಗಮನಿಸಿದರೆ ಸಭೆ ನಡೆಸಿದಂತೆಯೇ ಕಾಣುತ್ತಿದೆ ಎಂದು ಅತೃಪ್ತ ಗುಂಪಿನ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ರಾಜು ಅಂಕಲಗಿ, ನೀಲಕಂಠ ಕಪ್ಪಲಗುದ್ದಿ, ಅಣ್ಣಾಸಾಬ ಕುಲಗುಡೆ, ಕೃಷ್ಣಾ ಅನಗೋಳಕರ ಮತ್ತು ಶಂಕರಗೌಡ ಪಾಟೀಲ ಅವರು ನಿನ್ನೆ ಶನಿವಾರದಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಸಲ್ಲಿಸುವ ಮೂಲಕ ಅಧ್ಯಕ್ಷ ರಮೇಶ ಕತ್ತಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.

ಬೆಳಗಾವಿಯಲ್ಲಿ ನಾಳೆಯ ಆತಂಕ: ಏನಾಗಲಿದೆ ಒಳಗೆ, ಹೊರಗೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button