ಪ್ರಗತಿವಾಹಿನಿ ಸುದ್ದಿ, ಕಾರದಗಾ ( ನಿಪ್ಪಾಣಿ) – ಯುದ್ಧಭೂಮಿಯಾಗಿರುವ ಉಕ್ರೇನ್ ನಲ್ಲಿ ಬೆಳಗಾವಿ ಜಿಲ್ಲೆಯ ಮತ್ತೊಬ್ಬ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ.
ನಿಪ್ಪಾಣಿ ತಾಲೂಕು ಕಾರದಗಾದ ಸೂರಜ್ ಬಾಗೋಜಿ ಎನ್ನುವ ವಿದ್ಯಾರ್ಥಿ ಉಕ್ರೇನ್ ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದು, ಕಳೆದ 4 ವರ್ಷಗಳಿಂದ ಅಲ್ಲೇ ಇದ್ದಾರೆ.
ಸೂರಜ್ ತಾಯಿ ರಾಣಿ ಬಾಗೋಜಿ ಪ್ರಗತಿವಾಹಿನಿಗೆ ಕರೆ ಮಾಡಿ ತಮ್ಮ ಆತಂಕ ತೋಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಗನೊಂದಿಗೆ ಮಾತನಾಡಿದ್ದೇನೆ. ಸುರಕ್ಷಿತವಾಗಿರುವುದಾಗಿ ಹೇಳಿದ್ದಾನೆ. ಆದರೆ ಇಂದು ಬೆಳಗ್ಗೆಯಿಂದ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದರು.
ರಾಜ್ಯ ಸರಕಾರ ಮಗನ ಸುರಕ್ಷತೆಯ ಬಗ್ಗೆ ಮತ್ತು ಸುರಕ್ಷಿತವಾಗಿ ಕರೆತರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.
ಉಕ್ರೇನ್ ನಲ್ಲಿ ಬೆಳಗಾವಿಯ ಮೂವರು; ಕನ್ನಡಿಗರ ಸುರಕ್ಷತೆಗೆ ಎಲ್ಲೆಡೆ ಒತ್ತಡ
ಕಂದಾಯ ಸಚಿವರ ಹೆಸರಿನಲ್ಲಿ ವರ್ಗಾವಣೆ ದಂಧೆ; PWD ನಿವೃತ್ತ ಇಂಜಿನಿಯರ್ ವಿರುದ್ಧ ಲೋಕಾಯುಕ್ತಕ್ಕೆದೂರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ