ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರಕ್ಕೆ ಮತ್ತೊಂದು ಉಪನೊಂದಣಾಧಿಕಾರಿಗಳ ಕಚೇರಿ ಮಂಜೂರಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಚೇರಿಗೆ ಉಪನೊಂದಣಾಧಿಕಾರಿ ಸೇರಿ 5 ಸಿಬ್ಬಂದಿ ಮಂಜೂರು ಮಾಡಲಾಗಿದೆ.
ಶಾಸಕ ಅಭಯ ಪಾಟೀಲ ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾ ನೊಂದಣಾಧಿಕಾರಿಗಳಿಂದ ಸರಕಾರ ಮಾಹಿತಿ ಕೇಳಿತ್ತು. ಅವರು ನೀಡಿದ ಮಾಹಿತಿಗಳನ್ನಾಧರಿಸಿ ಮತ್ತೊಂದು ಉಪನೊಂದಣಾಧಿಕಾರಿ ಕಚೇರಿ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
“ಬೆಳಗಾವಿಯಲ್ಲಿ ಇನ್ನೊಂದು ಸಬ್ ರಜಿಸ್ಟ್ರಾರ್ ಕಚೇರಿ ಅಗತ್ಯ ಎನ್ನುವುದನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆ ಒದಗಿಸಿದ್ದೆ. ಈಗ ಯಾವ ಸರಕಾರಿ ಕಟ್ಟಡದಲ್ಲಿ ಜಾಗ ಲಭ್ಯವಿದೆ ನೋಡಿ ಕಚೇರಿ ಆರಂಭಿಸಲಾಗುವುದು. ಗೋವಾವೇಸ್ ಕಾಂಪ್ಲೆಕ್ಸ್ ಅಥವಾ ಟಿಳಕವಾಡಿಯ ಸ್ಮಾರ್ಟ್ ಸಿಟಿ ಕಚೇರಿ ಇದ್ದ ಕಟ್ಟಡ ಯಾವುದೂ ಸೂಕ್ತ ಪರಿಶೀಲಿಸಿ ಕಚೇರಿ ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ