ಹಿಂದೂ ಸಂಸ್ಕೃತಿಯ ತಳ ಅಲ್ಲಾಡಿಸುವ ಕೆಲಸ ಆಗ್ತಿತ್ತು; ಮತಾಂತರ ನಿಷೇಧ ಬಿಲ್ ಪಾಸ್ ಆಗಿದ್ದು ಜೀವನದ ಅಪೂರ್ವ ಕ್ಷಣ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಬಿಲ್ ಪಾಸ್ ಆಗಿದ್ದು ಸಂತೋಷ ತಂದಿದೆ. ಈ ಕಾಯ್ದೆಯಿಂದ ಯಾವುದೇ ಧರ್ಮಕ್ಕೆ ಧಕ್ಕೆಯಾಗುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವರು, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಬಿಜೆಪಿ ಸರ್ಕಾರದಲ್ಲಿನ ಎರಡು ಪ್ರಮುಖ ಆದ್ಯತೆಯ ಕಾಯ್ದೆಗಳಾಗಿದ್ದವು. ಈ ಬಿಲ್ ಗಳು ಪಾಸಾಗಿರುವುದು ಸಂತಸದ ವಿಚಾರ. ನಾನು ಗೃಹಸಚಿವನಾಗಿರುವಾಗ ಮತಾಂತರ ನಿಷೇಧ ಕಾಯ್ದೆ ವಿಧೇಯಕ ಮಂಡಿಸಿ, ಬಿಲ್ ಪಾಸ್ ಆಗಿರುವುದು ನನ್ನ ಜೀವನದ ಅಪೂರ್ವ ಸಮಯವಿದು ಎಂದು ಸಂತಸ ವ್ಯಕ್ತಪಡಿಸಿದರು.
ಸರ್ವಧರ್ಮ ಸಹಿಷ್ಣತೆಯ ದೇಶ ನಮ್ಮ ಭಾರತ. ಹಿಂದೂ ಸಂಸ್ಕೃತಿಯ ತಳ ಅಲ್ಲಾಡಿಸುವ ಕೆಲಸವಾಗುತ್ತಿತ್ತು. ಧಾರ್ಮಿಕ ಸ್ವಾತಂತ್ರ್ಯದ ದುರುಪಯೋಗವಾಗುತ್ತಿತ್ತು. ಹಾಗಾಗಿ ಮತಾಂತರ ನಿಷೇಧಕ್ಕೆ ಬಿಗಿ ಕಾಯ್ದೆ ತರಲಾಗಿದೆ ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ನಾಯಕರು ಸದನದಲ್ಲಿ ಭಾರಿ ವಿರೋಧ ವ್ಯಕ್ತಪಡಿಸಿದರು. ಬಿಲ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಾಂಗ್ರೆಸ್ ನವರ ಮುಖವಾಡ ಕಳಚಿಬಿದ್ದಿದೆ. ಕಾಂಗ್ರೆಸ್ ನವರಿಗೆ ತಮ್ಮ ಖುರ್ಚಿ ಗಟ್ಟಿ ಆಗಬೇಕು ಅಷ್ಟೇ. ಜನರ ಹಕ್ಕು ಕಾಳಜಿ ಅವರಿಗೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರ ಕಿರಿಕುಳ; ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಯುವಕ
https://pragati.taskdun.com/latest/police-harrasmentyoung-mansuicide/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ