
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಖ್ಯಾತ ವೈದ್ಯೆ ಡಾ.ಜಯಶ್ರೀ ಅವರ ಸೊಸೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕಾರ್ ಶೆಡ್ ನಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪ್ರಕರಣದ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ನವ್ಯಶ್ರೀ ಮೃತ ಮಹಿಳೆ. ಕಳೆದ 5 ತಿಂಗಳ ಹಿಂದೆ ಡಾ.ಜಯಶ್ರೀ ಪುತ್ರ ಆಕಾಶ್ ಹಾಗೂ ನವ್ಯಶ್ರೀ ವಿವಾಹವಾಗಿತ್ತು. ಚಿಕ್ಕಮಗಳೂರು ಮೂಲದ ನವ್ಯಶ್ರೀ ಹಾಗೂ ಶಿವಮೊಗ್ಗದ ಆಕಾಶ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಕುಟುಂಬದವರೇ ನೋಡಿ ಮಾಡಿದ ಮದುವೆಯಾಗಿತ್ತು.
ಆದರೆ ನವ್ಯಶ್ರೀಗೆ ಮನೆಯಲ್ಲಿ ಕಿರುಕುಳ ನಿಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ನವ್ಯಶ್ರೀ ಶವ ಶಿವಮೊಗ್ಗದ ಅಶ್ವತ್ಥನಗರದ ಮನೆಯಲ್ಲಿಯೇ ಕಾರ್ ಶೆಡ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೇ ಕೈಯಲ್ಲಿ ಕುಯ್ದುಕೊಂಡಿರುವ ಗಾಯಗಳಾಗಿವೆ.
ಮಗಳನ್ನು ಅತ್ತೆಯ ಮನೆಯವರೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ನವ್ಯಶ್ರೀ ಪೋಷಕರು ಆರೋಪಿಸಿದ್ದಾರೆ.
ನವ್ಯಶ್ರೀ ತುಂಬ ಧೈರ್ಯವಂತ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ಆಕೆಯ ಪತಿ ಆಕಾಶ್ ತುಂಬಾ ಕುಡಿಯುತ್ತಿದ್ದ. ಅಲ್ಲದೇ ತಡ ರಾತ್ರಿ 2 ಗಂಟೆಯಾದರೂ ಮನೆಗೆ ಬರುತ್ತಿರಲಿಲ್ಲ. ಈ ಬಗ್ಗೆ ನವ್ಯಶ್ರೀ ನಮಗೆ ಹೇಳಿದ್ದಳು ಕೆಲ ದಿನಗಳ ಹಿಂದೆ ಈರೀತಿಯಾದರೆ ಮಗಳ ಬದುಕು ಹೇಗೆ ಎಂದು ನಾವು ಪ್ರಶ್ನಿಸಿದ್ದೆವು. ಕೋಪಗೊಂಡು ಒಂದು ದಿನ ಮಧ್ಯರಾತ್ರಿ ಚಿಕ್ಕಮಗಳೂರಿಗೆ ತವರು ಮನೆಯ ಬಳಿ ರಸ್ತೆಯಲ್ಲಿ ನವ್ಯಶ್ರೀಯನ್ನು ಬಿಟ್ಟು ಆಕಾಶ್ ಹೋಗಿದ್ದ. ಬಳಿಕ ಕೆಲ ದಿನಗಳ ನಂತರ ಮತ್ತೆ ನವ್ಯಶ್ರೀ ಮನೆಗೆ ಹೋಗಿದ್ದಳು. ಆ ಘಟನೆ ಬಳಿಕ ತಂದೆ-ತಾಯಿ, ಅಣ್ಣನಿಗೂ ಫೋನ್ ಮಾಡುವುದನ್ನು ಕಡಿಮೆ ಮಾಡಿದ್ದಳು. ಪತಿಗೆ ಗೊತ್ತಾಗದಂತೆ, ಮನೆಯಲ್ಲಿ ಯಾರೂ ಇಲ್ಲದಾಗ ಮಾತ್ರ ಕರೆ ಮಾಡುತ್ತಿದ್ದಳು. ಮನೆಯಲ್ಲಿ ಆಕೆ ಒಬ್ಬಳನ್ನೆ ಬಿಟ್ಟು ಹೊರಗಡೆ ಲಾಕ್ ಮಾಡಿ ಅತ್ತೆ ಆಸ್ಪತ್ರೆಗೆ ಹೋಗುತ್ತಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಳು ಎಂದು ನವ್ಯಶ್ರೀ ಸಹೋದರ ಹಾಗೂ ಕುಟುಂಬದವರು ಆರೋಪಿಸಿದ್ದಾರೆ. ನವ್ಯಶ್ರೀಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿ ಬೆಂಗಳೂರಿಗೆ ಬಂದ ಖರ್ಗೆ; ಕಾಂಗ್ರೆಸ್ ನಾಯಕರಿಂದ ಬೃಹತ್ ಹಾರ ಹಾಕಿ ಭವ್ಯ ಸ್ವಾಗತ
https://pragati.taskdun.com/politics/mallikarjuna-khargeaicc-presidentbangalore-visit/