ರಾಜ್ಯದಲ್ಲಿ ಮೋದಿ ಸುನಾಮಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ರಾಜ್ಯದಲ್ಲಿ ಮೋದಿ ಸುನಾಮಿ ಪ್ರಕಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಮೋದಿಯವರು ಭಾರತದ ಮಹಾನ್ ನಾಯಕ, ಅತ್ಯಂತ ಕಷ್ಟ ಕಾಲದಲ್ಲಿ ಭಾರತವನ್ನು ಎತ್ತಿಹಿಡಿದು, ಭಾರತದ ಗಡಿ ರಕ್ಷಣೆ ಮಾಡಿ ಆಂತರಿಕ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಾರೆ. ಭಾರತವನ್ನು ಅಭಿವೃದ್ಧಿ ಪಥದಲ್ಲಿ ನಡೆಸಿ ಕೋವಿಡ್ ಸಂದರ್ಭದಲ್ಲಿ ಬಡವರ ಕೈಹಿಡಿದಿದ್ದಾರೆ ಎಂದರು.

ಸೋಮಣ್ಣ ಮತ್ತು ನಾನು ಬಹಳ ಹಳೆಯ ಸ್ನೇಹಿತರು. ನಿನ್ನೆ ಹುಬ್ಬಳ್ಳಿಯಲ್ಲಿ ಔಪಚಾರಿಕವಾಗಿ ಭೇಟಿ ಆಗಿದ್ದಷ್ಟೇ. ನಮ್ಮ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ವಿ.ಸೋಮಣ್ಣ ಜತೆಗೇ ಇದ್ದಾರೆ. ಮುಂದೆಯೂ ಇರ್ತಾರೆ.

Home add -Advt

ಕೆಪಿಟಿಸಿಎಲ್ ಹಾಗೂ ಎಸ್ಕಾಂ ನವರೊಂದಿಗೆ ನಮ್ಮ ಸಚಿವರು ಸಂಪರ್ಕದಲ್ಲಿದ್ದಾರೆ. ಸಮಸ್ಯೆ ಬಗೆಹರಿಸಲಾಗುವುದು ಎಂದರು.

Related Articles

Back to top button