ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಿಕ್ಷಕರ 33,863 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ ಎಂದು ಕರ್ನಾಟಕ ಶಿಕ್ಷಣ ಇಲಾಖೆಯಿಂದ ಅತಿಥಿ ಶಿಕ್ಷಕರ ನೇಮಕಾತಿಗೆ ಪ್ರಕಟಣೆ ಹೊರಬಿದ್ದಿದೆ.
ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ ಮತ್ತು ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಅರ್ಜಿ ಸಲ್ಲಿಸಲು 15-06-2024 ನೇ ತಾರೀಕು ಕೊನೆಯ ದಿನವಾಗಿದೆ.
ಹುದ್ದೆಯ ವಿವರ
ಸಂಸ್ಥೆ/ಇಲಾಖೆ– ಸಾರ್ವಜನಿಕ ಶಿಕ್ಷಣ ಇಲಾಖೆ
ಹುದ್ದೆಗಳ ಹೆಸರು– ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು
ಹುದ್ದೆಗಳ ಸಂಖ್ಯೆ– 33,863 ಹುದ್ದೆಗಳು
ಕೆಲಸದ ಸ್ಥಳ– ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ
ವೇತನ ಶ್ರೇಣಿ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ವಯ ತಿಂಗಳಿಗೆ ರೂ. 10500/- ವೇತನ ನೀಡಲಾಗುತ್ತದೆ.
ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಯುಸಿ ಅಥವಾ ಪದವಿ ಮತ್ತಿ ಡಿಎಡ್ ಅಥವಾ ಬಿಎಡ್ ಮುಗಿಸಿರಬೇಕು.
ವಯೋಮಿತಿ
ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಯೋಮಿತಿಯನ್ನು ಹೊಂದಿರಬೇಕು.
ನಿಗದಿಪಡಿಸಿದ ಶುಲ್ಕ- ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ
ಮುಖ್ಯ ಶಿಕ್ಷಕರುಗಳ ನೇತೃತ್ವದ ಆಯ್ಕೆ ಸಮಿತಿಯು ನಿಯಮಾನುಸಾರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಫೋಡ್ ಮಾಡಿಕೊಂಡು ವಿವರಗಳನ್ನು ಓದಬಹುದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಖಾಲಿ ಹುದ್ದೆಗಳ ವಿವರವನ್ನು ಪಡೆದ ನೇರವಾಗಿ ಶಾಲೆಯ ಮುಖ್ಯಗುರುಗಳಿಗೆ ಬಯೋಡಾಟಾ ಮತ್ತು ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಕೂಡಲೇ ಸಲ್ಲಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ