Belagavi NewsBelgaum NewsKannada NewsKarnataka News
ಮರ ಬಿದ್ದು ಬೈಕ್ ಸವಾರ ಸಾವು: ಇಬ್ಬರಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಕಳೆದೆರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಅನೇಕ ಅವಾಂತರಗಳು ಆಗುತ್ತಿದೆ. ಇಂದು ಮಳೆಗೆ ಮರ ಬೈಕ್ ಸವಾರರ ಮೇಲೆ ಬಿದ್ದಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಬೆಳಗುಂದಿಯ
ಬಿಜಗರಣಿ ರೋಡ್ ನಲ್ಲಿ ಕೆಲಸಕ್ಕೆ ಒಂದೆ ಬೈಕ್ ಮೇಲೆ ಹೊರಟ್ಟಿದ್ದ ಮೂವರ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಇದರ ಪರಿಣಾಮ ಕರ್ಲೆ ಗ್ರಾಮದ ನಿವಾಸಿ ಸೋಮನಾಥ್ ಮುಚ್ಚಂಡೆಕರ್ (23) ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇನ್ನು ಈ ಘಟನೆಯಲ್ಲಿ ಸ್ವಪ್ನಿಲ್ ಸುನಿಲ್ ದೇಸಾಯಿ (21) ಹಾಗೂ ವಿಠಲ್ ಕೃಷ್ಣಾ ತಳವಾರ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂಧಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.



