Kannada NewsKarnataka NewsLatest

*ಜೈಲು ಸೇರಿದರೂ ಬುದ್ಧಿ ಕಲಿಯದ ಮಾಜಿ ಸಂಸದ; ಪ್ರಜ್ವಲ್ ರೇವಣ್ಣ ಮೊಬೈಲ್, ಪೆನ್ ಡ್ರೈವ್ ನಲ್ಲಿ ನೂರಾರು ಅಶ್ಲೀಲ ವಿಡಿಯೋಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಷ್ಟಾದರೂ ಬುದ್ಧಿ ಕಲಿತಿಲ್ಲ. ಜೈಲಿನಲ್ಲಿಯೂ ಮೊಬೈಲ್ ಫೋನ್, ವಿಡಿಯೋ ಕಾಲ್ ನಡೆಸಿ ಸಿಕ್ಕಿ ಬಿದ್ದಿರುವ ಪ್ರಜ್ವಲ್ ರೇವಣ್ಣನ ಮೊಬೈಲ್ ಫೋನ್ ಪರಿಶೀಲಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ.

ಸಿಸಿಬಿ ಪೊಲೀಸರು ಪ್ರಜ್ವಲ್ ಬ್ಯಾರೆಕ್ ಮೇಲೆ ದಾಳಿ ನಡೆಸಿದ್ದಾ ವೇಳೆ ಆತನ ಕೈಯಲ್ಲಿ ಮೊಬೈ, ಸಿಮ್ ಕಾರ್ಡ್, ಪೆನ್ ಡ್ರೈವ್, ನೋಟ್ ಬುಕ್ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿದ್ದವು. ಅವುಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಮೊಬೈಲ್ ನಲ್ಲಿ ಪ್ರಜ್ವಲ್ ನದ್ದೇ ಹಲವು ಅಶ್ಲೀಲ ವಿಡಿಯೋಗಳು, ಬೇರೆ ಅಶ್ಲೀಲ ವಿಡಿಯೋ ಫೋಟೋಗಳು, ಪೆನ್‌ಡ್ರೈವ್‌ನಲ್ಲಿ 100 ಸೆಕ್ಸ್ ವಿಡಿಯೋಗಳು ಪತ್ತೆಯಾಗಿವೆ, ಅಲ್ಲದೇ ಜೈಲಿನ ಟಿವಿಯಲ್ಲಿಯೂ ಸೆಕ್ಸ್ ವಿಡಿಯೋ ನೋಡುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಎಫ್‌ಎಸ್‌ಎಲ್ ವರದಿ ಬಂದಿದ್ದು, ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳು ಇರುವುದು ತಿಳಿದುಬಂದಿದೆ. ಅಲ್ಲದೇ ಕೈದಿಗಳ ಬ್ಯಾರಕ್‌ನಲ್ಲಿ ಅಳವಡಿಸಲಾಗಿದ್ದ ಟಿವಿಗೆ ಪೆನ್‌ಡ್ರೈವ್ ಹಾಕಿ ಪ್ರಜ್ವಲ್ ಈ ವೀಡಿಯೊಗಳನ್ನು ವೀಕ್ಷಿಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿದ್ದ ಒಟ್ಟು 173 ಫೈಲ್‌ಗಳ ಪೈಕಿ, ಮೊಬೈಲ್‌ನಲ್ಲಿ ಚಲನಚಿತ್ರಗಳು ಮತ್ತು ವೆಬ್ ಸೀರೀಸ್‌ಗಳು ದೊರೆತಿವೆ. ಆದರೆ ಪೆನ್‌ಡ್ರೈವ್‌ನಲ್ಲಿ 100 ಅಶ್ಲೀಲ ವಿಡಿಯೋಗಳು ಇರುವುದು ದೃಢಪಟ್ಟಿದೆ. ಆದರೆ ಈ ಪೆನ್‌ಡ್ರೈವ್ ಅನ್ನು ಯಾವ ಸಮಯದಲ್ಲಿ ಬಳಸಲಾಗಿದೆ ಎಂಬುದನ್ನು ಖಚಿತಪಡಿಸಲು ಪೊಲೀಸರು ಮತ್ತೆ ಎಫ್‌ಎಸ್‌ಎಲ್ ತಜ್ಞರ ಸಹಾಯ ಕೋರಿದ್ದಾರೆ.

ಕಳೆದ ತಿಂಗಳು ಆ.11ರಂದು ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ ಪ್ರಜ್ವಲ್ ರೇವಣ್ಣ ಸಹಕೈದಿ ಪ್ರತಾಪ್ ರಾಯ್ ಅವರ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದವು. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಜಪ್ತಿ ಮಾಡಿದ್ದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button