Belagavi NewsBelgaum NewsKannada NewsKarnataka NewsPolitics

*ಅಭಿಸಂದಾನ ದಂಡ ವಸೂಲಿ: 28 ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ನಗರದ ವಿವಿಧ ದಿನಸಿ ಅಂಗಡಿ, ಹೂವಿನ ಅಂಗಡಿ, ನ್ಯಾಯಬೆಲೆ ಅಂಗಡಿ, ಹಾಗೂ ಎ.ಪಿ.ಎಂ.ಸಿ.ಯಲ್ಲಿನ ತರಕಾರಿ ಅಂಗಡಿಗಳನ್ನು ಬೆಳಗಾವಿ ವಿಭಾಗದ ಉಪನಿಯಂತ್ರಕರಾದ ಎಸ್.ಆರ್.ಮಾಳಿ ನೇತೃತ್ವದಲ್ಲಿ ನಿಯಂತ್ರಕರಾದ ಎಸ್.ಎಂ.ಬುರಾನಪೂರ, ಸಹಾಯಕ ನಿರೀಕ್ಷಕರಾದ ಚಂದ್ರಶೇಖರ ಬಸಪ್ರಭು ಅವರುಗಳು ಕುಲಂಕೂಷವಾಗಿ ಪರಿಶೀಲಿಸಿ ಒಟ್ಟು 223 ತಪಾಸಣೆ ಜರುಗಿಸಿ 28 ಮೊಕದ್ದಮೆ ದಾಖಲಿಸಿ ಒಟ್ಟು 63,000 ರೂ. ದಂಡ ವಸೂಲಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ ಒಟ್ಟು 24,27,573 ಸತ್ಯಾಪನೆ ಶುಲ್ಕ ಸಂಗ್ರಹಿಸಿ 1158 ತಪಾಸಣೆ ಜರುಗಿಸಿ 124 ಮೊಕದ್ದಮೆಗಳನ್ನು ಹೂಡಿ 3,36,000 ಅಭಿಸಂದಾನ ದಂಡ ವಸೂಲಿ ಮಾಡಲಾಗಿರುತ್ತದೆ.

Home add -Advt

Related Articles

Back to top button