Cancer Hospital 2
Beereshwara 36
LaxmiTai 5

*ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಲಾರಿ ಪಲ್ಟಿ: ಸಂಚಾರ ದಟ್ಟಣೆ *

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಚಚಡಿ ಗ್ರಾಮದ ಹತ್ತಿರದ ಬೆಳಗಾವಿ, ಬಾಗಲಕೋಟೆ ರಾಜ್ಯ ಹೆದ್ದಾರಿ ನಡುವೆ ಎಂಸ್ಯಾಂಡ್ ಮರಳು ತುಂಬಿದ್ದ ಭಾರಿ ಗಾತ್ರದ ಲಾರಿ ಪಲ್ಟಿಯಾಗಿ ಬಿದ್ದದ್ದನ್ನು ಕ್ರೇನ್ ಮೂಲಕ ತೆರುವುಗೊಳಿಸುವ ವೇಳೆ ಒಂದು ಗಂಟೆಗೂ ಹೆಚ್ಚು ಸಮಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆಯಿತು.

Emergency Service

ಮರಳು ತುಂಬಿದ್ದ ಲಾರಿ ಬೆಳಗಾವಿ, ಬಾಗಲಕೋಟೆ ಹೆದ್ದಾರಿ ಮೂಲಕ ಬೆಳಗಾವಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವೆ ಮುಗುಚಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಮುರಗೋಡ ಠಾಣೆ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಎತ್ತಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು.

ಈ ಸಮಯದಲ್ಲಿ ನೂರಾರು ಸಂಖ್ಯೆಯಲ್ಲಿ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಬಸ್, ಖಾಸಗಿ ವಾಹನಗಳ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

Bottom Add3
Bottom Ad 2