*45 ವರ್ಷಗಳ ಪರಂಪರೆ: ಕನ್ನಡ ಮಹಿಳಾ ಭುವನೇಶ್ವರಿ ಉತ್ಸವದಲ್ಲಿ ಮಹಿಳೆಯರ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕನ್ನಡ ಮಹಿಳಾ ಸಂಘದ ವತಿಯಿಂದ ಕಳೆದ 45 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಆಚರಿಸಿಕೊಂಡು ಬರುತ್ತಿರುವ ಕನ್ನಡ ಮಹಿಳಾ ಭುವನೇಶ್ವರಿ ಉತ್ಸವವನ್ನು ಈ ವರ್ಷವೂ ಸಂಭ್ರಮದಿಂದ ಆಚರಿಸಲಾಯಿತು.
ರಂಜನಾ ನಾಯಕ್, ರಾಜಶ್ರೀ ಕೆಂಭಾವಿ ಹಾಗೂ ಮಹೇಶ್ವರಿ ಗಾಳಿ ಅವರ ನೇತೃತ್ವದಲ್ಲಿ ನಡೆದ ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಭಾರತೀ ವಡವಿ ವಹಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದರು.

ಭಾನುವಾರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದು, 100ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ರಸಪ್ರಶ್ನೆ, ರಂಗೋಲಿ, ಅಡುಗೆ ಹಾಗೂ ಸಮೂಹ ಗಾಯನ ಸ್ಪರ್ಧೆಗಳು ಗಮನ ಸೆಳೆದವು.
ರಸಪ್ರಶ್ನೆ ಸ್ಪರ್ಧೆ:
ಪ್ರಥಮ – ರಮ್ಯಶ್ರೀ
ದ್ವಿತೀಯ – ಸುನೀತಾ ಸೊಲ್ಲಾಪುರೆ
ತೃತೀಯ – ದಾನಮ್ಮ
ಸಿಹಿ ಅಡುಗೆ ಸ್ಪರ್ಧೆ:
ಪ್ರಥಮ – ವೃಂದಾ ದೇಸಾಯಿ
ದ್ವಿತೀಯ – ರಾಜಶ್ರೀ ಅಕ್ಕಿ
ತೃತೀಯ – ನೀತಾ ಶೆಟ್ಟಿ
ಖಾರ/ನಮ್ಕೀನ್ ಅಡುಗೆ ಸ್ಪರ್ಧೆ:
ಪ್ರಥಮ – ಶ್ರುತಿ ಚೊನ್ನದ್
ದ್ವಿತೀಯ – ಶ್ರೀದೇವಿ ಹಡಿಮಣಿ
ತೃತೀಯ – ನಂದಾ ಲೋಕಣ್ಣವರ
ರಂಗೋಲಿ ಸ್ಪರ್ಧೆ:
ಪ್ರಥಮ – ಪೂಜಾ
ದ್ವಿತೀಯ – ವೃಂದಾ ದೇಸಾಯಿ
ತೃತೀಯ – ವಿದ್ಯಾ ಪಾಟೀಲ
ಸಮೂಹ ಗಾಯನ ಸ್ಪರ್ಧೆ:
ಪ್ರಥಮ – ದೀಪಾ ಪಾಡಕಿ ಮತ್ತು ತಂಡ
ದ್ವಿತೀಯ – ನಿವೇದಿತಾ ಮತ್ತು ತಂಡ
ತೃತೀಯ – ಅನುಶ್ರೀ ಮತ್ತು ತಂಡ
ಸಮಾಧಾನಕರ ಬಹುಮಾನ – ದಿವ್ಯಾ ಮತ್ತು ತಂಡ
ರಂಗೋಲಿ ಸ್ಪರ್ಧೆಗೆ ಕೆ.ವಿ.ಯ ನಿವೃತ್ತ ಶಿಕ್ಷಕಿ ಅರ್ಚನಾ ಹಾಗೂ ಸವಿತಾ ಅನ್ವೇಕರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಅಡುಗೆ ಸ್ಪರ್ಧೆಗೆ ರೂಪಾಂಜಲಿ ಭೋಸಲೆ ಹಾಗೂ ಶ್ರೀಮತಿ ಮೇಧಾ ಕಾಂಗೋ, ಸಮೂಹ ಗಾಯನಕ್ಕೆ ಶಿರೀಶ್ ಜೋಶಿ ಹಾಗೂ ಮಂಜುಳಾ ಜೋಶಿ, ರಸಪ್ರಶ್ನೆ ಸ್ಪರ್ಧೆಗೆ ವೀಣಾ ಕುಲಕರ್ಣಿ ಹಾಗೂ ಶ್ವೇತಾ ಬಿಜಾಪುರೆ ತೀರ್ಪುಗಾರರಾಗಿ ಸ್ಪರ್ಧೆಗಳ ಮೌಲ್ಯಮಾಪನ ಮಾಡಿದರು.
ಬೆಳಗಾವಿಯ ಬಿ.ಕೆ. ಮಾಡೆಲ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಭಾರತೀ ವಡವಿ ಅವರು ವ್ಯವಸ್ಥಿತವಾಗಿ ಆಯೋಜಿಸಿದ್ದರು. ಸ್ಪರ್ಧೆಗಳ ಬಳಿಕ ಮಹಿಳೆಯರು ಗ್ರ್ಯಾಂಡ್ ಹೌಸಿ ಆಟದಲ್ಲಿ ಪಾಲ್ಗೊಂಡು ಉತ್ಸಾಹದಿಂದ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉಷಾ ಬಾಲಗಿ, ಶೀಲಾ ದೇಶಪಾಂಡೆ, ಲೀಲು ಚೌಗಲೆ, ಶೈಲಾ ಇನಾಮದಾರ್, ಹರ್ಷಾ ಬುರ್ಳಿ, ಮಧುಮಿತಾ ಮುತಾಲಿಕ್ ದೇಸಾಲ್, ಜ್ಯೋತಿ ಭಾವಿಕಟ್ಟಿ ಸೇರಿದಂತೆ ಹಲವು ಮಹಿಳೆಯರು ಉಪಸ್ಥಿತರಿದ್ದರು.
ರಂಜನಾ ನಾಯಕ್ ಅವರೊಂದಿಗೆ ಎಲ್ಲರೂ ಭುವನೇಶ್ವರಿ ಪೂಜೆ ನೆರವೇರಿಸಿ, ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗಾಗಿ ಪ್ರಾರ್ಥಿಸಿದರು. 45 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಉತ್ಸವವು ಮಹಿಳೆಯರ ಪ್ರತಿಭೆ, ಸಾಂಸ್ಕೃತಿಕ ಅಭಿರುಚಿ ಮತ್ತು ಕನ್ನಡಾಭಿಮಾನವನ್ನು ಒಗ್ಗೂಡಿಸುವ ವೇದಿಕೆಯಾಗಿ ಗಮನ ಸೆಳೆಯಿತು.



