*ಶತದಿನದ ಸಂಭ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರ: ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಮಹತ್ವದ ಯೋಜನೆಗಳು*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಳೆ ಯಶಸ್ವಿ 100 ದಿನಗಳನ್ನು ಪೂರೈಸಲಿದೆ. ಡಿ.ಕೆ.ಶಿವಕುಮಾರ್ ಸರ್ಕಾರ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನೆ ಹಗೂ ಕೈಗೊಂಡ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ ಕೆ ಶಿವಕುಮಾರ್ ಅವರು ಕೈಗೊಂಡ ಮಹತ್ವದ ತೀರ್ಮಾನಗಳು:
• ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
• ರಾಜ್ಯದ ಎಲ್ಲಾ ಪಂಚಾಯಿತಿ, ವಾರ್ಡ್ ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ. ತಲಾ 10 ಲಕ್ಷ ರೂ. ನೀಡುವ ನಿರ್ಣಯ.
o 2500 ಅಡಿವರೆಗಿನ ನೂತನ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ
o ರಾಜ್ಯದೆಲ್ಲೆ ‘ಬಿ’ ಯಿಂದ ‘ಎ’ ಖಾತಾ ಪರಿವರ್ತನೆ.
o ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು 2 ಸಾವಿರ ಕೋಟಿ ರೂ. ಯೋಜನೆ.
o ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ತೀರ್ಮಾನ.
• 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ 6 ತಿಂಗಳ ಗಡವು.
• ಸಾರ್ವಜನಿಕರ ಕುಂದುಕೋರತೆ, ಅಹವಾಲು ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಸಚಿವಾಲಯ.
• ಶಾಸಕರು, ಮಂತ್ರಿಗಳ ಒತ್ತಡಕ್ಕೆ ಮಣಿಯದೇ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ.
• ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದವರಿಗೆ ಮಾತ್ರ ಸಿಗಬೇಕು ಹಾಗೂ ಸೋರಿಕೆ ತಪ್ಪಿಸಲು ಕ್ರಮ.
• ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಕಣಕ್ಕಿಳಿಸಿ ಗೆಲುವು.
• ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆಗೆ ಸೂಚನೆ.
o ಕೇಂದ್ರದ ನೀತಿ ಆಯೋಗ ಸಭೆಯಲ್ಲಿ ಭಾಗಿ ಕರ್ನಾಟಕದ ಬೇಡಿಕೆಗಳ ಪ್ರಸ್ತಾಪ.
• ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ಸಿ.ಆರ್ ಪಾಟೀಲ್, ನಿರ್ಮಲಾ ಸೀತರಾಮನ್, ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳು, ಬೆಂಗಳೂರಿನ
ಮೆಟ್ರೋ, RRTS ರೈಲು ಹಾಗೂ ಪೋಲೀಸ್ ಇಲಾಖೆಗಳ ಯೋಜನೆಗಳು ಹಾಗೂ ವಿಶೇಷ ಅನುದಾನಗಳ ಬಗ್ಗೆ ಚರ್ಚೆ.
• ದೆಹಲಿಯಲ್ಲಿರುವ ರಾಜ್ಯದ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ಸಭೆ ಮಾಡಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಲು ಕರೆ.
• ಕಾಲೇಜು ಚುನಾವಣೆಗಳನ್ನು ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲು ಚಿಂತನೆ.
• ಎಲ್ಲಾ ತಾಲ್ಲೂಕುಗಳಲ್ಲಿ ರಿಂಗ್ ರಸ್ತೆ ಗ್ರಿಡ್ ಗುರುತಿಸಲು ನಿರ್ದೇಶನ.
• ಭ್ರಷ್ಟಾಚಾರ ವಿರುದ್ಧ ದೂರು ನೀಡಲು ದೂರವಾಣಿ ಸಂಖ್ಯೆ.
• ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಗೆ ಜಿಪಿಎಸ್ ತಂತ್ರಾಂಶದ ಸಿಬ್ಬಂದಿ ಹಾಜರಾತಿಗೆ ಸೂಚನೆ.
• ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ನಿರ್ದೇಶನ.
• ನೂತನ ಸಿಎಸ್ಆರ್ ನೀತಿ ತರಲು ಅಧಿಕಾರಿಗಳಿಗೆ ಸೂಚನೆ.
• ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆಗೆ ಅಧಿಕಾರಿಗಳ ಜೊತೆ ಸಭೆ.
• ಮಾವು ಬೆಳೆಗಾರರಿಗೆ ಕಳೆದ ವರ್ಷದಂತೆ ಪ್ರೋತ್ಸಾಹ ಧನ ಮುಂದುವರಿಸಲು ತೀರ್ಮಾನ.
• ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ನಿರ್ದೇಶನ.
• ಕರಾವಳಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿವಿಧ ಕ್ರಮ.
• ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ತೀರ್ಮಾನ.
• ಕರ್ನಾಟಕ ರಾಜ್ಯದ ಹಿತ ಕಾಯಲು ದೆಹಲಿಯಲ್ಲಿ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳ ತಂಡ ರಚನೆಗೆ ನಿರ್ಧಾರ.
• ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ನಿರ್ವಹಣೆ ಮತ್ತು ತ್ವರಿತ ಇತ್ಯರ್ಥಕ್ಕೆ ವಕೀಲರ ತಂಡ ಸದೃಢಗೊಳಿಸಲು ತೀರ್ಮಾನ.
• ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚನೆಗೆ ನಿರ್ಧಾರ.
• ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕಗಳ ಸಂರಕ್ಷಣೆಗೆ 5 ಕೋಟಿ ರೂ ಹಾಗೂ 2 ಎಕರೆ ಜಾಗ ನೀಡಲು ತೀರ್ಮಾನ.
• ತುಂಗಭದ್ರಾ ಅಣೆಕಟ್ಟು ನೂತನವಾಗಿ ಅಳವಡಿಸಲಾಗಿರುವ ಸ್ಪಿಲ್ ಗೇಟ್ ಗಳ ಉದ್ಘಾಟನೆ.
• ತುಂಗಾಭದ್ರ ಪಾತ್ರದ ರೈತರ ರಕ್ಷಣೆಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಒಗ್ಗಟ್ಟಾಗಿ ಸೇರಿ ಒಮ್ಮತದ ತೀರ್ಮಾನ.
• ಅಣೆಕಟ್ಟಿನಲ್ಲಿ ಹೂಳು ತೆಗೆಯಲು ಕೇಂದ್ರದಿಂದ ಯೋಜನೆ.
• ಬಡವರ ವಸತಿ ಯೋಜನೆಗಳ ಮಂದಗತಿಗೆ ಅಸಮಾಧಾನ, ಆದಷ್ಟು ಬೇಗ ವಸತಿ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ.
• ಬಡವರಿಗೆ ನಿವೇಶನ ಬದಲು ಮನೆ ಕಟ್ಟಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ.
• ಕೆಂಪೇಗೌಡ ಬಡಾವಣೆಯಲ್ಲಿ 10 ಪಥಗಳ ಎಸ್.ಎಂ ಕೃಷ್ಣ ರಸ್ತೆ ಉದ್ಘಾಟನೆ.
• ತೆರಿಗೆ ವಂಚನೆ ತಡೆಯುವಂತೆ ಅಧಿಕಾರಿಗಳಿಗೆ ಸೂಚನೆ.
• ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ತೀರ್ಮಾನ.
• ಬಂಡೀಪುರ, ನಾಗರಹೊಳೆ ಹುಲಿ ಸಫಾರಿ ಪುನರಾರಂಭ.
• ಹೆಬ್ಬಾಳ ಬಳಿ ಸಣ್ಣ ಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ
• ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಬಿಡಿಎ ವತಿಯಿಂದ ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಗಿನ್ನೀಸ್ ದಾಖಲೆ ನಿರ್ಮಾಣ.
• ಸಾರ್ವಜನಿಕ ಯೋಜನೆಗಳಿಗೆ ಭೂಮಿ ಕೊಡುವ ರೈತರು, ಭೂಮಾಲೀಕರಿಗೆ ಗೌರವ ನೀಡಲು ವಾಲ್ ಆಫ್ ಗ್ರ್ಯಾಟಿಟ್ಯೂಡ್ ನಿರ್ಮಾಣಕ್ಕೆ ನಿರ್ಧಾರ.
• 2028ಕ್ಕೆ ನಶೆ ಮುಕ್ತ ಕರ್ನಾಟಕ ನಿರ್ಮಾಣದ ಗುರಿ.
• ಅಮಲು ಬೆರೆಸುವ ಪಾನ್ ಮಸಾಲ, ಗುಟ್ಕಾಗಳ ನಿಷೇಧಿಸುವ ಎಚ್ಚರಿಕೆ.
• ಡ್ರಗ್ಸ್ ಜಾಲ ನಿಗ್ರಹಕ್ಕೆ ಸುಳಿವು ನೀಡಿದವರಿಗೆ ಬಹುಮಾನ ನೀಡಲು ತೀರ್ಮಾನ.
• ಖಾಸಗೀಕರಣ ವಿರೋಧಿಸುತ್ತಿದ್ದ ಎಸ್ಕಾಂ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ.
• ಹಾಸನದ ಐಐಟಿಗೆ ಭೂಸ್ವಾಧೀನದಿಂದ ಸರಿಯಾದ ಪರಿಹಾರ ಸಿಗದೆ ನೊಂದ ಹಾಸನದ ರೈತರಿಗೆ 2013ರ ಕೋರ್ಟ್ ಆದೇಶ ಅನ್ವಯ ಪರಿಹಾರ ನೀಡುವ ಭರವಸೆ.
• ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದ ಜನರ ಮತದಾನದ ಹಕ್ಕು ರಕ್ಷಣೆಗೆ ನಿವಾಸ ದೃಢೀಕರಣ ಪತ್ರ ಸೇರಿದಂತೆ ಸರ್ಕಾರದಿಂದ ಅಗತ್ಯ ನೆರವು.
• ಕೇಂದ್ರ ಅರಣ್ಯ ಇಲಾಖೆಗಳಲ್ಲಿ ಅರಣ್ಯ ಅನುಮತಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಜು.15ರ ಒಳಗೆ ಇತ್ಯರ್ಥಕ್ಕೆ ಸೂಚನೆ.
• ಗಣಿಗಾರಿಕೆ ಸೇರಿ ನಾನಾ ಚಟುವಟಿಕೆಗಳಿಗೆ ಸರ್ಕಾರಿ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಆ ಭೂಮಿ ಹಿಂಪಡೆಯಲು ಸೂಚನೆ.
• ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಭೂಕಂಪನ ಅಧ್ಯಯನಕ್ಕೆ ಮಣ್ಣು ಪರೀಕ್ಷೆಗೆ ಹಾಗೂ ಸಮೀಕ್ಷೆಗೆ ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಿದ್ದು, ಇದರ ಮುಂದುವರಿದ ಭಾಗವಾಗಿ ಕೇಂದ್ರ ವನ್ಯಜೀವಿ ಮಂಡಳಿಗೆ ಅನುಮತಿ ಕೋರಿ ಶಿಫಾರಸ್ಸು.
• ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ
• ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ 2-3ನೇ ಹಂತದ ನಗರಗಳಲ್ಲಿ ಉದ್ಯಮಗಳ ಆಕರ್ಷಣೆ
• 2-3 ಹಂತದ ನಗರಗಳಲ್ಲಿ ಡಬಲ್ ಎಫ್ಎಆರ್ ನೀಡಲು ತೀರ್ಮಾನ
• ಬರ ಪರಿಸ್ಥಿತಿ ಎದುರಿಸಲು ತೀರ್ಮಾನ
• ಕಲಬುರ್ಗಿಯಲ್ಲಿ 320 ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್
• ಬೆಳೆ ವಿಮೆ ಬಾಕಿ ಬಿಡುಗಡೆ, ರೈತರಿಗೆ ಆಸರೆ
• ಬೆಂಗಳೂರಿನಾಚೆ ಹೊಸ ಬೆಗಳೂರು ನಿರ್ಮಾಣಗಳ ಘೋಷಣೆ
• ಬೆಳಗಾವಿಯಲ್ಲಿ ವಿಭಾಗ ಮಟ್ಟದ ಪರಿಶೀಲನೆ
• ಕುಡಿಯುವ ನೀರು ಪೂರೈಕೆಗೆ ಗ್ರಾಮೀಣ ಭಾಗದ ಕ್ಷೇತ್ರಗಳಿಗೆ ತಲಾ 1 ಕೋಟಿ ಅನುದಾನ
• ರಾಮಮಂದಿರ ಲೂಟಿ ಹಿನ್ನೆಲೆ ರಾಜ್ಯದ ಮುಜರಾಯಿ ದೇಗುಲಗಳ ಹುಂಡಿಗಳ ರಕ್ಷಣೆಗೆ ಸಿಸಿಟಿವಿ ಕಣ್ಗಾವಲು
• ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ
• ದಸರಾದಲ್ಲಿ ಏರ್ ಶೋ ನಡೆಸಲು ಕೇಂದ್ರಕ್ಕೆ ಮನವಿ,
• ದಸರಾದಲ್ಲಿ ಕಂಬಳ ಸೇರಿ ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳ ಸೇರ್ಪಡೆ
• ಓಎಸ್ ಟಿ ಮರು ಜಾರಿ ಬಗ್ಗೆ ಪರಿಶೀಲನೆಯ ಭರವಸೆ
• ತಿರುಮಲ ದೇಗುಲ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿ, ಗಣ್ಯರಿಗೆ ಅವಕಾಶ
• ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿವಿ ಸ್ಥಾಪನೆ ಘೋಷಣೆ
• ರಾಜ್ಯದ ಬರ ಅದ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಮಂತ್ರಿಗಳಿಗೆ ಪತ್ರ
• ಕರ್ನಾಟಕ ಅಪಾರ್ಟ್ ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ ಕುರಿತು ಸಂವಾದ
• ಆಗಸ್ಟ್ 6ರವರೆಗೆ ಸಲಹೆ ಸೂಚನೆಗೆ ಅವಕಾಶ
• ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಲವಂತದ ಭೂಸ್ವೀಧೀನ ಮಾಡುವುದಿಲ್ಲ ಎಂದು ಘೋಷಣೆ
• ರೈತರ ಅಹವಾಲು, ಅಭಿಪ್ರಾಯ ಕೇಳಲು ಸಮಿತಿ ರಚನೆ
• ಬರ ಪರಿಸ್ಥಿತಿ ಬಗ್ಗೆ ಡಿಸಿ ಮತ್ತು ಸಿಇಒಗಳ ಸಭೆ
• ಟೀಮ್ ಕರ್ನಾಟಕವಾಗಿ ಕೆಲಸ ಮಾಡಲು ಕರೆ
• ಕೆಪಿಎಸ್ ಸಿ ಅಕ್ರಮ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ಸಂಪುಟದ ಒಪ್ಪಿಗೆ
• 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅನುಮೋದನೆ
• ಎಸ್ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹಕ್ಕು ಉಳಿಸಲು ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಹಾಗೂ ನಿವಾಸ ದೃಢೀಕರಣ ಪತ್ರ
• ರಾಜ್ಯದಲ್ಲಿ ಸಿಎಸ್ಆರ್ ನಿಧಿಯ ಪ್ರತಿ ಪೈಸೆ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಲು ತೀರ್ಮಾನ
• ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಖಾಸಗಿ ಶಾಲೆಗಳು ದತ್ತು ಪಡೆಯಲು ಸೂಚನೆ
• ಹಿರಿಯೂರಿನ ಕೆರೆಗಳಿಗೆ ನೀರು ತುಂಬಿಸಲು ತೀರ್ಮಾನ, 244 ಕೋಟಿ ರೂ ಮೊತ್ತದ ಯೋಜನೆಗಳಿಗೆ ಒಪ್ಪಿಗೆ
• ನವದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ
• ರಾಜ್ಯದ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡಲು ಕರೆ
• ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಸಹಕಾರ ನೀಡುವಂತೆ ಒತ್ತಡ ಹೇರಲು ಮನವಿ
• ಕಾವೇರಿ ವಿಚಾರದಲ್ಲಿ ತಿಮಿಳುನಾಡು ಸಿಎಂ ಜೊತೆ ಚರ್ಚೆಗೆ ಸಿದ್ಧತೆ
• ಪರಿಸ್ಥಿತಿ ತಿಳಿಯಾದ ಬಳಿಕ ಚರ್ಚೆ ನಡೆಸಲು ಸಭೆ ಮುಂದೂಡಿಕೆ
• ನೇಮಕಾತಿಗಳಿಗೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ
• ಕೆಪಿಎಸ್ ಸಿ ಹಾಗೂ ಕೆಇಎ ನೇಮಕಾತಿಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲು ಸೂಚನೆ
• ಬೆಂಗಳೂರಿನಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಚಾಲನೆ
• ಸರ್ಕಾರ ಸೊಸೈಟಿಗಳಿಂದ ಪಡೆದ ನಿವೇಶನಗಳಲ್ಲಿ 5 ವರ್ಷಗಳಲ್ಲಿ ಮನೆ ಕಟ್ಟದಿದ್ದರೆ ನಿವೇಶನ ವಾಪಸ್ ಪಡೆಯುವ ಘೋಷಣೆ
• ಕರ್ನಾಟಕಕ್ಕೆ ಹೃದಯ ವೈಶಾಲ್ಯತೆಯಿಂದ ನೆರವು ನೀಡಲು ಪ್ರಧಾನಿಗೆ ಮನವಿ
• ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಸರ್ವಪಕ್ಷ ಸಭೆ ನಡೆಸಿ ಎಲ್ಲರ ವಿಶ್ವಾಸ, ಅಭಿಪ್ರಾಯ ಸಂಗ್ರಹ
• ಎಲ್ಲಾ ಸಚಿವರು ಜಿಲ್ಲೆಗಳಿಗೆ ಹೋಗಿ ಅತಿವೃಷ್ಟಿ, ಅನಾವೃಷ್ಟಿ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ
• ಪ್ರತಿಭಟನಾ ನಿರತ ಕೃಷಿ ಪದವೀಧರರ ಸಮಸ್ಯೆ ಆಲಿಸಿದ ಸಿಎಂ
• ಕೃಷಿ ಅಧಿಕಾರಿ ನೇಮಕಾತಿ ಗೊಂದಲ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ
• ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಪರೀಕ್ಷೆ ಮುಂದೂಡಲು ಸರ್ಕಾರ ನಿರ್ಧಾರ
• ಆಡಳಿತ ಕೌಶಲ್ಯಾಭಿವೃದ್ಧಿ ಮತ್ತು ಡೀಪ್ ಟೆಕ್ ಪ್ರಗತಿಗಾಗಿ ಕರ್ನಾಟಕ ಮತ್ತು ಆಂಥ್ರೋಪಿಕ್ ಸಂಸ್ಥೆ ನಡುವೆ ಎಐ ಸಹಭಾಗಿತ್ವ
• ಬೆಂಗಳೂರಿನಲ್ಲಿ ಲಾಲ್ ಬಾಗ್ ಮಾದರಿ 3 ಉದ್ಯಾನವನ ನಿರ್ಮಾಣಕ್ಕೆ ತೀರ್ಮಾನ
• ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಜಾರಿಗೆ ತಂದು ಸಾಮಾಜಿಕ ನ್ಯಾಯ ಒದಗಿಸಲು ಬದ್ಧ ಎಂದು ಘೋಷಣೆ
• ರಾಜ್ಯದಲ್ಲಿ ಸಿಎಸ್ ಆರ್ ನಿಧಿ ಬಳಕೆ ಮೇಲೆ ಪ್ರತ್ಯೇಕ ನಿಗಾ ವಹಿಸಲು ಪ್ರತ್ಯೇಕ ಐಎಎಸ್ ಅಧಿಕಾರಿ ನೇಮಕಕ್ಕೆ ತೀರ್ಮಾನ
• ಅಮೆರಿಕ ರಾಯಭಾರಿ ಸೆರ್ಗಿಯೋ ಗೊರ್ ಭೇಟಿ, ಬೆಂಗಳೂರಿನಲ್ಲಿ ಶಾಶ್ವತ ರಾಯಭಾರಿ ಕಚೇರಿ ಸ್ಥಾಪನೆಗೆ ಮನವಿ
• ಬಿಡದಿ ಟೌನ್ ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾ.ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ, 30 ದಿನಗಳಲ್ಲಿ ವರದಿಗೆ ಸೂಚನೆ
• ಮಾಲೂರಿನಲ್ಲಿ 3200 ಕೋಟಿ ಮೊತ್ತದ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
• ಅಲೆಮಾರಿ ಮತ್ತು ಆದಿವಾಸಿ ಆಯೋಗ ಒಂದು ತಿಂಗಳಲ್ಲಿ ರಚನೆಯ ಭರವಸೆ



