Kannada NewsKarnataka News

ಸರಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಗಾಗಿ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦೨೨-೨೩ನೇ ಸಾಲಿನ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಬಯಸುವ ಫಲಾಪೇಕ್ಷಿಗಳು ಅಕ್ಟೊಂಬರ್ ೨೦ ಒಳಗಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಜಾತಿ/ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಹಾಲಿ ಜಮೀನುಗಳ ಖುಷ್ಕಿಯಾಗಿದ್ದು ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು.

ಬೆಳಗಾವಿ ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು ೧೮ ರಿಂದ ೬೦ ವರ್ಷದ ಒಳಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.೯೮,೦೦೦/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ. ೧,೨೦,೦೦೦/-ಗಳ ಒಳಗಿರಬೇಕು. ಅರ್ಜಿದಾರರ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ ೦೨ ಎಕರೆ ಗರಿಷ್ಠ ೦೫ಎಕರೆ ಜಮೀನು ಹೊಂದಿರಬೇಕು.

ವೈಯಕ್ತಿಕ ಕೊಳವೆ ಬಾವಿಯ ಘಟಕ ವೆಚ್ಚ ರೂ.೨.೫೦ ಲಕ್ಷಗಳು, ಇದರಲ್ಲಿ ರೂ.೨.೦೦ಲಕ್ಷ ಸಹಾಯಧನ ಹಾಗೂ ರೂ.೫೦,೦೦೦/- ನಿಗಮದಿಂದ ಶೇ.೪ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತ ಒಳಗೊಂಡಿದೆ. ರೈತರು ಆಧಾರ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ ಕಾರ್ಡ್‌ನಲ್ಲಿರುವಂತೆ ರೈತರ ಹೆಸರು,(ಶ್ರೀ/ಶ್ರೀಮತಿ, ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರಕಾರ್ಡ್‌ನಲ್ಲಿರುವಂತೆ ಹೆಸರು ಹೊಂದಾಣ ಕೆಯಾಗಬೇಕು.

ಈ ಹಿಂದೆ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ. ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ  https://www.dbcdc.karnataka.gov.in ವೆಬ್‌ಸೈಟ್‌ನಲ್ಲಿ ಸಂಪರ್ಕಿಸಿ ಅಥವಾ ನಿಗಮದ ದೂರವಾಣಿ ಸಂಖ್ಯೆ ೦೮೩೧-೨೪೦೨೧೬೩ ಮತ್ತು ಸಹಾಯವಾಣ ಸಂಖ್ಯೆ ೯೬೦೬೦೬೬೩೮೯ ಅಥವಾ ೮೮೨೪೩೦೦೪೦೦ ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಶ್ಯಕ್ಷಣಿಕ ಸಾಲ ಹಾಗೂ ಉನ್ನತ ವಾಸಂಗಕ್ಕೆ ಆರ್ಥಿಕ ನೆರವು ಯೋಜನೆಯಡಿ ಅರ್ಜಿ ಆಹ್ವಾನ

೨೦೨೨-೨೩ರ ಸಾಲಿನ ಅರಿವು ಶೈಕ್ಷಣ ಕ ಸಾಲ ಯೋಜನೆ(ಹೊಸತು) : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳ ವಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಬಯಸುವ ವಿದ್ಯಾರ್ಥಿಗಳು ಅಕ್ಟೊಂಬರ್ ೨೦ ರ ಒಳಗಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

೨೦೨೨-೨೩ರ ಸಾಲಿನ ಅರಿವು ಶೈಕ್ಷಣ ಕ ಸಾಲ ಯೋಜನೆ(ನವೀಕರಣ) : ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳ ವಾಪ್ತಿಗೆ ಒಳಪಡುವ ವಿದ್ಯಾರ್ಥಿಗಳು ಈಗಾಗಲೇ ಸದರಿ ನಿಗಮಗಲ್ಲಿ ಅರಿವು ಶೈಕ್ಷಣ ಕ ಸಾಲ ಯೋಜನೆಯಲಿ ಸಾಲ ಪಡೆದಿರುವ ವಿದ್ಯಾರ್ಥಿಗಳು ಉಳಿದ ೦೩ ಮತ್ತು ೦೪ ಕಂತುಗಳ ಸಾಲ ಬಿಡುಗಡೆಗಾಗಿ ಅಕ್ಟೊಂಬರ್ ೨೦ ರ ಒಳಗಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆ : ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ (೧)ಇಂಜಿನಿಯರಿಂಗ್ & ಟೆಕ್ನಾಲಜಿ, (೨)ಮಾನ್ಯೇಜಮೆಂಟ್ & ಕಾಮರ್ಸ್, (೩)ಸೈನ್ಸ & ಟೆಕ್ನಾಲಜಿ, (೪)ಅಗ್ರಿಕಲ್ಚರ್ & ಅಲೈಡ್ ಸೈನ್ಸ್‌ಸ್/ಟೆಕ್ನಾಲಜಿ, (೫)ಮೆಡಿಸಿನ್ ಮತ್ತು (೬)ಹ್ಯುಮ್ಯಾನಿಟೀಸ್ & ಸೊಶಿಯಲ್ ಸೈನ್ಸ್‌ಸ್ (ಈ ೦೬ ಕೋರ್ಸ್‌ಗಳ, ಕ್ಷೇತ್ರಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತದೆ.) ಈ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ರೂ.೫.೦೦ ಲಕ್ಷಗಳಂತೆ ಮೂರು ವರ್ಷಗಳ ಅವಧಿಗೆ ಗರಿಷ್ಠ ರೂ.೧೫.೦೦ಲಕ್ಷಗಳ ಸಾಲವನ್ನು ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಬಯಸುವ ವಿದ್ಯಾರ್ಥಿಗಳು ಅಕ್ಟೊಂಬರ್ ೨೦ ರ ಒಳಗಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್‌ನಲಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ವಿದ್ಯಾರ್ಥಿಗಳು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ ಕಾರ್ಡ್‌ನಲ್ಲಿರುವಂತೆ ವಿದ್ಯಾರ್ಥಿಗಳ ಹೆಸರು,(ಶ್ರೀ/ಶ್ರೀಮತಿ, ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆ ಪುಸ್ತಕದಲ್ಲಿಯು ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರಕಾರ್ಡ್‌ನಲ್ಲಿರುವಂತೆ ಹೆಸರು ಹೊಂದಾಣ ಕೆಯಾಗಬೇಕು.

ಈ ಹಿಂದೆ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ.

ಮೇಲ್ಕಂಡ ಯೋಜನೆಗಳಲ್ಲಿ ವಿದ್ಯಾರ್ಥಿಗಳು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ  https://www.dbcdc.karnataka.gov.in ವೆಬ್‌ಸೈಟ್‌ನಲ್ಲಿ ಸಂಪರ್ಕಿಸಿ ಅಥವಾ ನಿಗಮದ ದೂರವಾಣಿ ಸಂಖ್ಯೆ ೦೮೩೧-೨೪೦೨೧೬೩ ಮತ್ತು ಸಹಾಯವಾಣಿ ಸಂಖ್ಯೆ ೯೬೦೬೦೬೬೩೮೯ ಅಥವಾ ೮೮೨೪೩೦೦೪೦೦ ಸಂಪರ್ಕಿಸಬಹದು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕರ್ನಾಟಕ ಮರಾಠ ಸಮುದಾಯಕ್ಕೆ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ (ನಿ.) ದ ವತಿಯಿಂದ ಸರ್ಕಾರದ ಪ್ರವರ್ಗ-೩-ಬಿ ಅಡಿಯಲ್ಲಿ ೨(ಎ) ಯಿಂದ ೨(ಎಫ್)ವರೆಗೆ ಬರುವ(ಎ)ಮರಾತ, ಮರಾಠ, (ಬಿ)ಅರೆಕ್ಷತ್ರಿ, ಅರೆ ಮರಾಠ, ಆರ‍್ಯಮರಾಠ (ಸಿ)ಆರ್ಯ, ಆರ್ಯರು (ಡಿ)ಕೊಂಕಣ ಮರಾಠ (ಇ)ಕ್ಷತ್ರಿಯ ಮರಾಠ/ಕ್ಷತ್ರಿಯ ಮರಾಠ (ಎಫ್) ಕುಳವಾಡಿ ಜನರ ಶೈಕ್ಷಣಿಕ ಹಾಗೂ ಅರ್ಥಿಕಾಭಿವೃದ್ಧಿಗಾಗಿ ೨೦೨೨-೨೩ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳಡಿ ಸೌಲಭ್ಯ ಪಡೆಯಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜೀಜಾವು-ಜಲಭಾಗ್ಯಯೋಜನೆ (ಗಂಗಾ ಕಲ್ಯಾಣ ನೀರಾವರಿ ಯೋಜನೆ):

ವೈಯಕ್ತಿಕ ಕೊಳವೆಬಾವಿ ಯೋಜನೆ: ಸಣ್ಣ ಮತ್ತು ಅತಿ ಸಣ್ಣರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯಒದಗಿಸುವುದು. ಘಟಕ ವೆಚ್ಚ ರೂ.೨.೦೦ ಲಕ್ಷಗಳು. ಈ ವೆಚ್ಚದಲ್ಲಿ, ಪ್ರತಿ ಕೊಳವೆ ಬಾವಿಗೆ ವಿದ್ಯುದ್ದೀಕರಣಕ್ಕಾಗಿ ರೂ.೫೦,೦೦೦/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು.
ಈ ಯೋಜನೆಯಡಿ ಪ್ರಯೋಜನ ಪಡೆಯಬಯಸುವವರು. ಈ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ಕೆಳಕಂಡಂತೆ ಅರ್ಹತೆ ಹೊಂದಿರಬೇಕಾಗಿರುತ್ತದೆ:-

ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ ೨ ಎಕರೆ ಹಾಗೂ ಗರಿಷ್ಠ ೫ ಎಕರೆಜಮೀನು ಹೊಂದಿರಬೇಕು; ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ವಾರ್ಷಿಕ ವರಮಾನ ರೂ.೯೮,೦೦೦/-ಗಳ ಮಿತಿಯಲ್ಲಿರಬೇಕು. ೧೮-೬೦ ವರ್ಷಗಳ ವಯಸ್ಸಿನ ಮಿತಿಯಲ್ಲಿರಬೇಕು. ೨೦೨೨-೨೩ರ ಸಾಲಿನ ಅರಿವು ಶೈಕ್ಷಣ ಕ ಸಾಲ ಯೋಜನೆ (ಹೊಸತು)
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ಸರ್ಕಾರಿ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ, ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್‌ಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾದ, ೧೮ ರಿಂದ ೩೫ ವರ್ಷ ವಯೋಮಿತಿಯ ಹಾಗೂ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ ರೂ.೩.೫೦ ಲಕ್ಷಗಳಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ (೧) ಇಂಜಿನಿಯರಿಂಗ್ & ಟೆಕ್ನಾಲಜಿ (೨) ಮ್ಯಾನೇಜ್‌ಮೆಂಟ್ & ಕಾಮರ್ಸ್ (೩) ಸೈನ್ಸ್ & ಟೆಕ್ನಾಲಜಿ, (೪) ಅಗ್ರಿಕಲ್ಚರ್ & ಅಲೈಡ್ ಸೈನ್ಸಸ್ / ಟೆಕ್ನಾಲಜಿ, (೫) ಮೆಡಿಸಿನ್ ಮತ್ತು (೬) ಹ್ಯುಮ್ಯಾನಿಟೀಸ್& ಸೋಷಿಯಲ್ ಸೈನ್ಸಸ್ (ಈ ೬ ಕೋರ್ಸ್‌ಗಳ, ಕ್ಷೇತ್ರಗಳಿಗೆ ( Category ) ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತದೆ). ಈ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಾಗೂ ೧೮ ರಿಂದ ೩೫ ವರ್ಷ ವಯೋಮಿತಿಯ ಮತ್ತು ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ ರೂ.೮.೦೦ ಲಕ್ಷಗಳಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ವಾರ್ಷಿಕ ಗರಿಷ್ಠ ರೂ.೭.೫೦ ಲಕ್ಷಗಳಂತೆ ಎರಡು ವರ್ಷಗಳ ಅವಧಿಗೆ ಗರಿಷ್ಠ ರೂ.೧೫,೦೦ಲಕ್ಷಗಳ ಸಾಲವನ್ನು ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯು ರೂ.೨೫.೦೦ಲಕ್ಷಗಳಿಗೆ ಅನುದಾನವನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಆದೇಶವನ್ನು ನಿರೀಕ್ಷಿಸಿದೆ. ಮೇಲಿನ ಎಲ್ಲಾ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಬಯಸುವವರು ದಿನಾಂಕ:೦೭-೦೯-೨೦೨೨ ರಿಂದ ೨೧-೧೦-೨೦೨೨ ರವರೆಗೆ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿರುತ್ತದೆ. ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು ಆಧಾರ್‌ಕಾರ್ಡ್‌ನಲ್ಲಿರುವಂತೆಯೇ ಅರ್ಜಿದಾರರ ಹೆಸರು (ಶ್ರೀ/ಶ್ರೀಮತಿ, ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್‌ಕಾರ್ಡ್‌ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ https://kmcdc.karnataka.gov.in ನಲ್ಲಿ ಸಂಪರ್ಕಿಸಿ ಅಥವಾ ಸಂಬಂಧಪಟ್ಟ ವೆಬ್‌ಸೈಟ್‌ನ್ನು ಅಥವಾ ನಿಗಮದ ದೂರವಾಣಿ ೦೮೩೧-೨೪೦೨೧೬೩/ಸಹಾಯವಾಣಿ ೮೮೬೭೫೩೭೭೯೯(ಬೆ.೧೦.೩೦ ರಿಂದ ಸ.೫.೩೦ ರವರೆಗೆ ಮಾತ್ರ) ಸಂಪರ್ಕಿಸುವುದು ಅರ್ಜಿದಾರರ ಆಧಾರ್ ಸಂಖ್ಯೆಯು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆಯೊಂದಿಗೆ ಸೀಡ್ ಆಗಿರಬೇಕು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೌಶಲ್ಯ ತರಬೇತಿ, ಸಾಲ ಹಾಗೂ ಸಹಾಯಧನ: ಅರ್ಜಿ ಆಹ್ವಾನ

೨೦೨೨-೨೩ ನೇ ಸಾಲಿನ ಜಿಲ್ಲಾ ವಲಯಯೋಜನೆಯಡಿಯಲ್ಲಿ ಬಂಡವಾಳ ಹೂಡಿಕೆಯೋಜನೆಯಡಿ ಸಾಲ ಹಾಗೂ ಸಹಾಯಧನ ಮತ್ತು ಆಧುನೀಕರಣ ತಾಂತ್ರಿಕತರಬೇತಿ ಕಾರ್ಯಕ್ರಮದಡಿ ವಿವಿಧ ವೃತ್ತಿಗಳಲ್ಲಿ ಕೌಶಲ್ಯಾಭಿವೃದ್ಧಿತರಬೇತಿ ಪಡೆಯಲುಗ್ರಾಮೀಣ ಪ್ರದೇಶದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಬೇಕಾಗಿದೆ.

೨೦೨೨-೨೩ ನೇ ಸಾಲಿನ ಜಿಲ್ಲಾ ವಲಯಯೋಜನೆಯಡಿಯಲ್ಲಿ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಾಲ ಹಾಗೂ ಸಹಾಯಧನ ಪಡೆಯಲು ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಂದ ಸಾಲಕ್ಕಾಗಿ ಅರ್ಜಿಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದವರಾಗಿದ್ದು ಕನಿಷ್ಠ ೧೮ ವರ್ಷ ಮೇಲ್ಪಟ್ಟುಗರಿಷ್ಠ ೪೫ ವರ್ಷ.ನಿಗದಿತ ನಮೂನೆಗಳನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದು.

ಆಧುನೀಕರಣ ತಾಂತ್ರಿಕ ತರಬೇತಿ ಕಾರ್ಯಕ್ರಮದಡಿ ವಿವಿಧ ವೃತ್ತಿಗಳಲ್ಲಿ ಕೌಶಲ್ಯಾಭಿವೃದ್ಧಿತರಬೇತಿ ಪಡೆಯಲು ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದವರಿಗೆ ಕನಿಷ್ಠ ೧೮ ವರ್ಷ ಮೇಲ್ಪಟ್ಟುಗರಿಷ್ಠ ೩೫ ವರ್ಷ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕನಿಷ್ಠ ೧೮ ವರ್ಷ ಮೇಲ್ಪಟ್ಟುಗರಿಷ್ಠ ೪೫ ವರ್ಷ. ಕನಿಷ್ಠ ೧೦ ನೇ ವರ್ಗ ಪಾಸಾಗಿರುವಅರ್ಹ ಅಭ್ಯರ್ಥಗಳಿಂದ ಉಪನಿರ್ದೇಶಕರು (ಖಾಗ್ರಾ), ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯತ ವಿಭಾಗ, ಬೆಳಗಾವಿ ಕಚೇರಿಯಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ನಮೂನೆಗಳನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲುಕೊನೆಯ ದಿನಾಂಕ : ೨೦/೦೯/೨೦೨೨ ಸಂಜೆ ೫.೩೦ ಗಂಟೆ. ಭರ್ತಿ ಮಾಡಿದ ಅರ್ಜಿಗಳನ್ನು ಉಪನಿರ್ದೇಶಕರು (ಖಾಗ್ರಾ) ಕಚೇರಿಗೆ/ಆಯಾ ತಾಲೂಕಿನ ಕೈಗಾರಿಕಾ ವಿಸರಣಾಧಿಕಾರಿಗಳಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು (ಖಾಗ್ರಾ)/ಆಯಾ ತಾಲೂಕಿನ ಕೈಗಾರಿಕಾ ವಿಸರಣಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಮೋಬೈಲ್.ಸಂಖ್ಯೆ: ೯೪೪೮೯೮೯೯೪೨, ೯೪೪೮೮೬೬೯೧೯ ಮತ್ತು ೬೩೬೨೫೪೬೭೦೭ ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragati.taskdun.com/latest/a-teachers-letter-went-viral/

 

ಬೆಳಗಿನ ವಾಕಿಂಗ್‌ನ 13 ಅದ್ಭುತ ಪ್ರಯೋಜನಗಳು

https://pragati.taskdun.com/article/13-amazing-benefits-of-morning-walking/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button