
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025-26 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಜಾರಿಗೊಳಿಸುವ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಬೆಳಗಾವಿ, ಬೈಲಹೊಂಗಲ, ಹುಕ್ಕೇರಿ, ಮೂಡಲಗಿ, ಸವದತ್ತಿ, ಗೋಕಾಕ, ಯರಗಟ್ಟಿ ತಾಲೂಕಿನ ಆಯ್ದ 51 ಗ್ರಾಮಗಳ ಬುಡಕಟ್ಟು ಸಮುದಾಯದ ಪರಿಶಿಷ್ಟ ಪಂಗಡದವರಿಗೆ ಪಿ.ಎಂ.ಎಂ.ಎಸ್,ವೈ ಯೋಜನೆಯ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯದ ಮಾರ್ಗ ಸೂಚಿಯಂತೆ ಅನುಷ್ಟಾನಗೊಳಿಸಲು ಅದಕ್ಕೆ ಸಂಭಂದಿಸಿದಂತೆ ಷರತ್ತಿಗೊಳಪಟ್ಟು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಬೆಳಗಾವಿ, ಬೈಲಹೊಂಗಲ, ಹುಕ್ಕೇರಿ, ಮೂಡಲಗಿ, ಸವದತ್ತಿ, ಗೋಕಾಕ, ಯರಗಟ್ಟಿ ತಾಲೂಕಿನ ಬುಡಕಟ್ಟು ಸಮುದಾಯದ ಫಲಾನುಭವಿಗಳು ಜ.31 ರ ಒಳಗಾಗಿ ಸಂಭಂದಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನೀರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಹಾಗೂ ದೂರವಾಣಿ ಸಂಖ್ಯೆ : 8722581982 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.




