Kannada NewsKarnataka NewsLatest

ಮುರುಘಾ ಮಠಕ್ಕೆ ಬಸವತತ್ವ ಹಿನ್ನೆಲೆಯ ಆಡಳಿತಾಧಿಕಾರಿ ನೇಮಕ ಮಾಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಚಿತ್ರದುರ್ಗ ಮುರುಘಾ ಮಠಕ್ಕೆ ಆಡಳಿತ ಅಧಿಕಾರಿ ನೇಮಕವನ್ನು ಬಸವ ತತ್ವದ ಹಿನ್ನಲೆಯ ಯೋಗ್ಯ ವ್ಯಕ್ತಿಯ ಆಡಳಿತಾಧಿಕಾರಿ ನೇಮಕ ಮಾಡುವಂತೆ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಆಗ್ರಹಿಸಿದರು‌.

ಶನಿವಾರ ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಲ್ಲಿ ಬಹುಮುಖಿ ಕಾರ್ಯಗಳು ಬಸವತತ್ವಕ್ಕೆ ಅನುಗುಣವಾಗಿ ನಡೆಯಬೇಕು. ಇದು ಸಮಸ್ತ ಲಿಂಗಾಯತ ಸಮುದಾಯದ ಆಶಯವಾಗಿದೆ.
ನಾಲ್ಕು ಶತಮಾನಗಳಿಂದ ಮುರಘಾ ಮಠ ಬಸವಧರ್ಮ ರಕ್ಷಿಸಿ ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಮಠದಲ್ಲಿ ಅದೇ ಸಂಪ್ರದಾಯ ಮುಂದುವರೆಯಬೇಕು. ಈ ಕುರಿತು ಸರಕಾರ ಗಮನ ಹರಿಸಬೇಕು ಎಂದರು.

ಬಸವ ತತ್ವದ ಹಿನ್ನಲೆಯ ಆಡಳಿತಾಧಿಕಾರಿಯ ನೇಮಕವಾಗಬೇಕು. ವೀರಶೈವ ಅಥವಾ ಇನ್ನಾವುದೇ ಹಿನ್ನಲೆಯ ಆಡಳಿತ ಅಧಿಕಾರಿ ನೇಮಕ ಮಾಡಬಾರದು. ಸರಕಾರಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸುತ್ತದೆ.

ಈ ಮಠದ ಸಂಪ್ರದಾಯಕ್ಕೆ ಧಕ್ಕೆ ತರುವಂಥ ವ್ಯಕ್ತಿಯ ನೇಮಕ ಮಾಡಬಾರದು. ಒಂದು ವೇಳೆ ನೇಮಕವಾದರೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚುಂಬನ ದಾಳಿಯಿಂದ ಯೂ ಟ್ಯೂಬರ್ ರಕ್ಷಿಸಿದ ಮುಂಬೈ ವ್ಯಕ್ತಿ

Related Articles

Back to top button