ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ರೌಡಿ ರಾಜಕೀಯ ಆರಂಭವಾಗಿದ್ದು, ಹಲವು ರೌಡಿ ಶೀಟರ್ ಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ರೌಡಿ ಶೀಟರ್ ಮಂಜ ಅಲಿಯಾಸ್ ಪಾನಿಪುರಿ ಮಂಜ, ಬಿಜೆಪಿ ಟಿಕೆಟ್ ಗಾಗಿ ಪ್ರತಿಭಟನೆ ನಡೆಸಿದ್ದಾನೆ.
ಬಿಜೆಪಿಯವರೇ, ನಾನೂ ರೌಡಿ ಶೀಟರ್. ನನಗೂ ಟಿಕೆಟ್ ಕೊಡಿ ಎಂದು ದೊಡ್ಡ ಬ್ಯಾನರ್ ಹಿಡಿದು ಪಾನಿಪುರಿ ಮಂಜ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾನೆ.
ಇಲ್ಲಿನ ಗಾಂಧಿ ವೃತ್ತದ ಬಳಿ ಬೃಹತ್ ಬ್ಯಾನರ್ ಹಿಡಿದು ನಿಂತಿರುವ ಮಂಜ ಅಲಿಯಾಸ್ ಪಾನಿಪುರಿ ಮಂಜ, ನಾನು ರೌಡಿ ಶೀಟರ್, ಎನ್.ಆರ್. ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಬಿಜೆಪಿ ನಾಯಕರು ನನಗೂ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದಾನೆ.
ಕೆಲ ರೌಡಿ ಶೀಟರ್ ಗಳಿಗೆ ಬಿಜೆಪಿ ಮಣೆ ಹಾಕಿರುವ ಬೆನ್ನಲ್ಲೇ ಇದೀಗ ಹಲವು ರೌಡಿ ಶೀಟರ್ ಗಳು ಬಿಜೆಪಿ ಟಿಕೆಟ್ ಗಾಗಿ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ.
ಆಪ್ ಆಧಾರಿತ ಕ್ಯಾಬ್, ಬೈಕ್ ಕಂಪನಿಗಳಿಗೆ ಕಠಿಣ ನಿಯಮ ಜಾರಿ
https://pragati.taskdun.com/apptaxicabtough-rulles/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ