
ಪ್ರಗತಿವಾಹಿನಿ ಸುದ್ದಿ: SSS ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಂದು ನಡೆದ ಘಟನೆಯೊಂದು ರೈಲ್ವೆ ಸಿಬ್ಬಂದಿಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಸಕಾಲದಲ್ಲಿ ಸಹಾಯ ಒದಗಿಸಿದ ಕಾರಣದಿಂದಾಗಿ, ಲಗೇಜ್ ಕಳೆದುಕೊಂಡ ಮಹಿಳಾ ಪ್ರಯಾಣಿಕೆಗೆ ತಕ್ಷಣವೇ ನೆರವು ಲಭಿಸಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕರು ಆಕಸ್ಮಿಕವಾಗಿ ತಮ್ಮ ಲಗೇಜ್ ಒಂದನ್ನು SSS ಹುಬ್ಬಳ್ಳಿ ನಿಲ್ದಾಣದಲ್ಲೇ ಬಿಟ್ಟು, ರೈಲು ಸಂಖ್ಯೆ 26751 ವೆಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದರು. ಲಗೇಜ್ ಬಿಟ್ಟು ಬಂದಿರುವುದು ಅರಿತ ತಕ್ಷಣ ಆತಂಕಗೊಂಡರು ಗಾಭರಿಯಾದರು, ಆಗ ಪ್ರಯಾಣಿಕರಿಗೆ ಸಂಚಾರಿ TTE ಗುರು ಹಿರೇಮಠ ಮಾರ್ಗದರ್ಶನ ನೀಡಿ, ‘139 ಸಹಾಯವಾಣಿಗೆ ಸಂಪರ್ಕಿಸಬೇಕೆಂದು ಸಲಹೆ ನೀಡಿದರು.
ಈ ಮಾಹಿತಿಯಂತೆ, ಪ್ರಯಾಣಿಕರು ಸಹಾಯಕೇಂದ್ರಕ್ಕೆ ಸಂಪರ್ಕಿಸಿದ ತಕ್ಷಣವೇ RPF ಸಿಬ್ಬಂದಿ ಶ್ರೀ ಹನುಮಂತ ದೂರು ದಾಖಲಿಸಿ, ಹುಬ್ಬಳ್ಳಿ RPF ಅಧಿಕಾರಿ ಸರೋಜಾ ಅವರೊಂದಿಗೆ ನಿಯಮಿತವಾಗಿ ಸಂಯೋಜನೆ ನಡೆಸಿದರು.
ಸಮಯ ವ್ಯರ್ಥವಾಗದಂತೆ ಲಗೇಜ್ ವನ್ನು ಸಂಗ್ರಹಿಸಿ, ಅದನ್ನು ಪ್ರಯಾಣಿಕರ ಸಹೋದರಿಗೆ ಸುರಕ್ಷಿತವಾಗಿ ಹಸ್ತಾಂತರ ಮಾಡಲಾಯಿತು. ರೈಲ್ವೆ ಸಿಬ್ಬಂದಿಯ ಈ ತ್ವರಿತ ಮತ್ತು ಕಾಳಜಿಯುತ ಸೇವಾ ಮನೋಭಾವವನ್ನು ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ. ರೈಲ್ವೆ ಸಹಾಯ ಕೇಂದ್ರದ ನಿರಂತರ ಸೇವೆಯಿಂದ ರೈಲ್ವೆಯ ಹಿರಿಮೆ ಮತ್ತಷ್ಟು ಹೆಚ್ಚುತ್ತಿದೆ.