Latest

ಮದುವೆಯಾದ 18 ವರ್ಷಗಳ ನಂತರ ಹೆಣ್ಣುಮಗು ಪಡೆದ ನಟ ಅಪೂರ್ವ- ಶಿಲ್ಪಾ ದಂಪತಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟರಾದ ಅಪೂರ್ವ ಅಗ್ನಿಹೋತ್ರಿ ಮತ್ತು ಶಿಲ್ಪಾ ಸಕ್ಲಾನಿ ಮದುವೆಯಾದ 18 ವರ್ಷಗಳ ನಂತರ ಚೊಚ್ಚಲ ಹೆಣ್ಣು ಮಗು ಪಡೆದಿದ್ದಾರೆ.

ಮಗುವನ್ನು ಸ್ವಾಗತಿಸಿ ಇಶಾನಿ ಕಾನು ಅಗ್ನಿಹೋತ್ರಿ ಎಂದು ಹೆಸರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನೊಂದಿಗಿನ ಮೊದಲ ಚಿತ್ರಗಳನ್ನು ಹಂಚಿಕೊಂಡ ಅಪೂರ್ವ, “ಹಾಗೆಯೇ, ಈ ಜನ್ಮದಿನವು ನನ್ನ ಜೀವನದ ಅತ್ಯಂತ ವಿಶೇಷವಾದ ಹುಟ್ಟುಹಬ್ಬವಾಗಿದೆ, ಏಕೆಂದರೆ ದೇವರು ನಮಗೆ ಅತ್ಯಂತ ವಿಶೇಷವಾದ, ನಂಬಲಾಗದ, ಅದ್ಭುತವಾದ, ಚಮತ್ಕಾರಿ ಉಡುಗೊರೆಯನ್ನು ನೀಡಿದ್ದಾನೆ,” ಎಂದು ಹೇಳಿಕೊಂಡಿದ್ದಾರೆ.

ಅಪೂರ್ವ ಹಾಗೂ ಶಿಲ್ಪಾ ದಂಪತಿ 2004 ರಲ್ಲಿ ಡೆಹ್ರಾಡೂನ್ ನಲ್ಲಿ ವಿವಾಹವಾಗಿದ್ದರು. ದಂಪತಿ  ಕೆಲವು ಟಿವಿ ಶೋಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಲ್ಲದೆ ಬಿಗ್ ಬಾಸ್ ಮತ್ತು ನಾಚ್ ಬಲಿಯೆಯಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

ತಂದೆ ಕಣ್ಣೆದುರೇ ಮಗನನ್ನು ತಿಂದುಹಾಕಿದ ಮೊಸಳೆ

Home add -Advt

Related Articles

Back to top button