Latest

ಸಿಎಂ ಸ್ಥಾನಕ್ಕೆ 6 ನಾಯಕರು ಟವೆಲ್ ಹಾಕಿದ್ದಾರೆ; ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿ; ತುಮಕೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಸ್ಥಾನದ ರೇಸ್ ಗಾಗಿ ಕಿತ್ತಾಟ ಆರಂಭವಾಗಿದೆ. ಅದೊಂದು ನಾಯಕನಿಲ್ಲದ ಹಡಗು, ರಾಹುಲ್ ಗಾಂಧಿ ಹೆಸರಲ್ಲಿ ನಾಲ್ಕು ವೋಟು ಗೆಲ್ಲುವ ಶಕ್ತಿಯಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಮದುವೆಯನ್ನೇ ಆಗಿಲ್ಲ… ಮಕ್ಕಳು ಆಗಿಲ್ಲ, ಆಗಲೇ ಬಟ್ಟೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಕೈ ನಾಯಕರದ್ದು ತಿರುಕನ ಕನಸು ಎಂದು ಗುಡುಗಿದರು.

ಕರ್ನಾಟಕದಲ್ಲಿ ಇನ್ನೂ 20 ವರ್ಷ ಹೋದರೂ ಕಾಂಗ್ರೆಸ್ ತಲೆ ಎತ್ತಲ್ಲ. ಕಾಂಗ್ರೆಸ್ ನಲ್ಲಿ ಸಿಎಂ  ಸ್ಥಾನಕ್ಕಾಗಿ ಈಗಾಗಲೇ 6 ಜನ ಟವಲ್ ಹಾಕಿದ್ದಾರೆ. 15 ದಿನ ಕಳೆದರೆ 60 ಜನ ಹುಟ್ಟಿಕೊಳ್ತಾರೆ. ಈಗಾಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ಖರ್ಗೆ,ಎಸ್.ಆರ್.ಪಾಟೀಲ್ ಸೇರಿದಂತೆ ಹಲವರು ಸಿಎಂ ರೇಸ್ ನಲ್ಲಿದ್ದಾರೆ. ಬಸ್ ನಲ್ಲಿ ಚಾಲಕನ ಸೀಟ್ ಇರುವುದು ಒಂದೇ. ಮುಂದೆ ಅದನ್ನೂ ಎತ್ತಿಕೊಂಡು ಹೋಗ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬೈಯಲ್ಲೇ ತೀರ್ಮಾನ, ಮುಂಬೈಯಲ್ಲೇ ಮಾತು ಎಂದ ರಮೇಶ್ ಜಾರಕಿಹೊಳಿ

Home add -Advt

Related Articles

Back to top button