ಪ್ರಗತಿವಾಹಿನಿ ಸುದ್ದಿ, ದೆಹಲಿ: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 14 ಚೀನಾ ನಾಗರಿಕರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಇವರೆಲ್ಲ ನೋಯ್ಡಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅಧಿಕೃತ ಪಾಸ್ ಪೋರ್ಟ್ ಪಡೆದಿದ್ದರೂ ಅವರ ಬಿಸಿನೆಸ್ ವಿಸಾ ಅವಧಿ ಮುಗಿದಿತ್ತು. ಆದಾಗ್ಯೂ 2020ರಿಂದ ಅನಧಿಕೃತವಾಗಿ ಭಾರತದಲ್ಲೇ ನೆಲೆಸಿದ್ದರು.
ಕಳೆದ ಜೂನ್ ನಲ್ಲಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಚೀನಾ ನಾಗರಿಕನನ್ನು ಬಂಧಿಸಲಾಗಿತ್ತು. ಈ ವೇಳೆ ವಿಚಾರಣೆ ತೀವ್ರಗೊಳಿಸಿದಾಗ ಈ ಅಕ್ರಮ ಬಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ