Cancer Hospital 2
Beereshwara 36
LaxmiTai 5

ಕೊಲೆ ಮಾಡಿ ಅಪಘಾತ ಎಂದು ನಂಬಿಸಿದ ಆರೋಪಿಗಳ ಬಂಧನ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಾರ್ ಡಿಕ್ಕಿ ಹೊಡೆದು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಬೀಮ್ಸ್ ಆಸ್ಪತ್ರೆ ಎದುರಿಗೆ ಮೇ 5 ರಂದು ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆಯ ಬೆಟಗೇರಿ ನಿವಾಸಿ ಸುರೇಶ ಹರ್ಲಾಪುರ ಅವರು, ತಮ್ಮ ಸಹೋದರ ಧಾರವಾಡದ ವನಶ್ರೀ ನಗರ, ಎಸ್‌ಡಿಎಂ ಕಾಲೇಜು ಹಿಂದೆ ಸತ್ತೂರ ನಿವಾಸಿ ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪೂರ (60) ಅವರಿಗೆ ಅಪಘಾತ ಆಗಿರುವ ಬಗ್ಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ. ಸಂಚಾರ ಉತ್ತರ ಠಾಣೆಯ ಪಿಐ ಪಿ. ಐ. ಚನ್ನಗಿರಿ ರವರು ಸಿಸಿಟಿವಿ ದೃಶ್ಯಾವಳಿ ಮತ್ತು ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಆರೋಪಿ ಬೆಳಗಾವಿಯ ಶಾಸ್ತ್ರಿ ನಗರ, ಕಂಗ್ರಾಳ ಬಿ. ಕೆ. ನಿವಾಸಿ ಮಹೇಶ ಸಿದ್ರಾಮ ಸುಂಕದ (24) ಈತನನ್ನ ಪತ್ತೆ ಮಾಡಿ ವಿಚಾರಿಸಿ ಹೇಳಿಕೆ ಪಡೆದುಕೊಂಡಾಗ ಇದೊಂದು ಪೂರ್ವಯೋಜಿತ ಅಪರಾಧಿಕ ಕೃತ್ಯವೆಂದು ದೃಢವಾಗಿದೆ.‌ ಬಳಿಕ ಪೊಲೀಸರು ಕೊಲೆ ಮಾಡಲು ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡು, ಈ ಪ್ರಕರಣವನ್ನು ಎಪಿಎಂಸಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.‌ ನಂತರ ತನಿಖೆ ಮುಂದುವರೆಸಿ ಸಂಚಾರ ಮತ್ತು ಎಪಿಎಂಸಿ ಠಾಣೆಯ ಸಿಬ್ಬಂದಿಯವರ ತಂಡ ಈ ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳುನ್ನು ಬಂಧಿಸಿದ್ದಾರೆ. 

Emergency Service

ಬಸವರಾಜ ಬಗವತಿ (50), ಪ್ರಕಾಶ ರಾಠೋಡ (41), ರವಿ ಕುಂಬರಗಿ (28), ಸಚೀನ ಪಾಟೀಲ (24), ರಾಮ ವಂಟಮುರಿ (28), ಇವರೆಲ್ಲನ್ನು ಪತ್ತೆ ಮಾಡಿ ವಿಚಾರಿಸಿದಾಗ, ಬಸವರಾಜ ಭಗವತಿ ಈತನು ವೈಯಕ್ತಿಕ ದ್ವೇಷದಿಂದ ವಿರೂಪಾಕ್ಷ ಹರ್ಲಾಪೂರ ಇವರಿಗೆ ಕಾರ್ ಹಾಯಿಸಿ ಕೊಲೆ ಮಾಡಿ, ಕಾರನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ  ಇನ್ನೊಬ್ಬ ಆರೋಪಿ ರಾಮಾ ಪಾಟೀಲ್ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಹಾಗೂ ಪ್ರಕರಣ ತನಿಖೆ ನಡೆಯುತ್ತಿದೆ.

ಈ ಪ್ರಕರಣದಲ್ಲಿ ಮಾರ್ಗದರ್ಶನ ನೀಡಿದ ಸಂಚಾರ ಉಪವಿಭಾಗದ ಎಸಿಪಿ ಪವನ್ ಎನ್, ಪಿಐ  ಪಿ. ಆರ್. ಚನ್ನಗಿರಿ, ಪಿಐ ಸಂಚಾರ ಉತ್ತರ ಠಾಣೆ, ಖಾಜಾ ಹುಸೇನ್ ಪಿಐ ಎಪಿಎಂಸಿ ಪೊಲೀಸ್ ಠಾಣೆ ಹಾಗೂ ಅವರ ಅಧೀನ ಸಿಬ್ಬಂದಿಗಳಾದ ಇ ಎ.ಬಿ. ಮೀಸೆ, ಬಿ. ಎಂ. ದೇಶಪೈಕ, ಸತೀಶ ನಾಯ್ಕವಾಡಿ, ಎಸ್ ಆರ್ ಮುನ್ನೇನಿ. ಆರ್. ವಿ. ರಸ್ಟಾಕರ್. ವೈ. ವೈ. ತಲೇವಾಡಿ, ಕಾಶಿನಾಥ ಈರಗಾರ. ಎಸ್.ವಿ. ಬಡಕುಂದ್ರಿ, ಎಸ್. ಎಸ್ ಹುಡೇದ, ಬಿ. ಎಸ್. ಬುಕನಟ್ಟಿ, ಹಾಗೂ ವಿವೇಕಾನಂದ ರವರ ತಂಡವನ್ನು ಬೆಳಗಾವಿ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಶಂಸಿಸಿದ್ದಾರೆ.‌

Bottom Add3
Bottom Ad 2