ಗ್ರಾಹಕರ ಸೋಗಿನಲ್ಲಿ ಬಂಗಾರದ ಕದ್ದ ಕಳ್ಳಿಯರ ಬಂಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಗ್ರಾಹಕರ ಸೋಗಿನಲ್ಲಿ ಬಂದು ಆಭರಣಗಳನ್ನು ಕಳುವು ಮಾಡಿದ್ದ ಮೂವರು ಮಹಿಳೆಯರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ನಗರ ಠಾಣೆ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದು ಘಟನೆ ನಡೆದ 12 ಗಂಟೆಯಲ್ಲಿ ಕಳ್ಳಿಯರನ್ನು ಬಂಧಿಸಲಾಗಿದೆ.

 ಸಂಗೀತಾ ಯಲ್ಲೋಸಾ ಬಾಕಳೆ (42), ರಾಜೇಶ್ವರಿ ಕೋಂ ರಾಮಚಂದ್ರ ಭಾಂಡಗೇ  (48) ಮತ್ತು ಶೋಭಾಬಾಯಿ ಕೋಂ ಲಕ್ಷ್ಮಣ  ಜಿತೂರಿ (63) ಎಂಬುವರೇ ಬಂಧಿತರು.

Home add -Advt

ಕದ್ದ 93ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಆರೋಪಿಗಳನ್ನು ಕಾರವಾರ ಜೈಲಿಗೆ ಕಳಿಸಲಾಗಿದೆ.

ಶಿರಸಿ ಐದು ರಸ್ತೆ ಸಮೀಪ ಇರುವ ಓಂಕಾರ ಜ್ಯುವೇಲರ್ಸನಲ್ಲಿ ಈ ಘಟನೆ ನಡೆದಿತ್ತು. ಸಿ.ಸಿ. ಟಿ.ವಿ.ಯಲ್ಲಿ ಮಹಿಳೆಯರ ಕೃತ್ಯ ಬಹಿರಂಗವಾಗಿದೆ.

ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ. ರಾಜಕುಮಾರ ಹಾಗೂ ತನಿಖಾ ಪಿ.ಎಸ್.ಐ. ರತ್ನಾ ಕುರಿ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button