Latest

ಮೋದಿ ಕಚೇರಿ ಮಾರಾಟಕ್ಕಿಟ್ಟವರ ಬಂಧನ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ವಾರಣಾಸಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯನ್ನು ಮಾರಾಟಕ್ಕಿಟ್ಟ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ಮೋದಿಯವರ ಕಚೇರಿ ಮಾರಾಟಕ್ಕಿದೆ ಎಂದು ಒಎಲ್ಎಕ್ಸ್ ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. 6,500 ಚದರ ಅಡಿಯ 4 ಕೊಠಡಿ ಹಾಗೂ 4 ಸ್ನಾನ ಗೃಹಗಳನ್ನು ಹೊಂದಿರುವ ಕಚೇರಿಯ ಬೆಲೆ 7.5 ಕೋಟಿ ರೂ. ಎಂದು ನಮೂದಿಸಲಾಗಿತ್ತು.

ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಲ್ಲದೆ, ಜಾಹಿರಾತನ್ನು ಅಳಿಸಿ ಹಾಕಿದ್ದಾರೆ. ವಿಚಾರಣೆ ಮುಂದುವರಿದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button