Kannada NewsKarnataka NewsLatest

ಮೂವರ ಬಂಧನ: 18 ಬೈಕ್ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಗ್ರಾಮೀಣ ಠಾಣೆಯ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ 6.50 ಲಕ್ಷ ರೂ. ಮೌಲ್ಯದ 18 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 9ರಂದು ಬೆಳಗಾವಿ ಗ್ರಾಮೀಣ ಠಾಣಾವ್ಯಾಪ್ತಿಯ ರಾಜಹಂಸಗಡ ಕಿಲ್ಲಾ ಹತ್ತಿರ ನಿಲ್ಲಿಸಿದ ಮೋಟರ್ ಸೈಕಲ್ ನ್ನು ಯಾರೋ ಕಳುವು ಮಾಡಿಕೊಂಡು ಹೋದ ಬಗ್ಗೆ ಬೈಕ್ ಮಾಲಿಕರು ನೀಡಿದ ದೂರಿನನ್ವಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿಯ ಕಳುವಾದ ವಾಹನ ಹಾಗೂ ಕಳ್ಳತನ ಮಾಡಿದವರ ಬಗ್ಗೆ ಸೂಕ್ಷ್ಮ ಮಾಹಿತಿ ಕಲೆ ಹಾಕುತ್ತ ಬಲೆ ಬೀಸಿದ ಗ್ರಾಮೀಣ ಪೊಲೀಸ್‌ರಿಗೆ ಬಂದ ಮಾಹಿತಿಯಂತೆ ಕೆ ಶಿವಾರೆಡ್ಡಿ, ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಮತ್ತು ಮಹಾಂತೇಶ್ವರ ಜಿದ್ದಿ ಎಸಿಪಿ ಅಪರಾಧ ರವರ ಮಾರ್ಗದರ್ಶನದಲ್ಲಿ  ಸುನೀಲ ಕುಮಾರ ನಂದೇಶ್ವರ ಹಾಗೂ ಅವರ ಠಾಣೆಯ ಪಿಎಸ್‌ಐ(ಕಾ&ಸು)  ಆನಂದ ಆದಗೊಂಡ, ಸಿಬ್ಬಂದಿಯವರಾದ  ವಾಯ್. ವಾಯ್. ತಳೇವಾಡಿ,  ಎಸ್. ಎಂ ಗಾಡವಿ,  ಸಿ ಎಂ ಹುಣಶ್ಯಾಳ, ಎಂ ಎನ್ ಚಿಪ್ಪಲಕಟ್ಟಿ, ಜಿ ವಾಯ್ ಪೂಜಾರ ಎಸ್ ಎಂ. ಶಿಂದಗಿ ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತು.

ಸಂಶಯುಕ್ತ ಆರೋಪಿತರಾದ ಅಕ್ಷಯ ಶಂಕರ ಚೌಗಲೆ, (೨೨) (ಸಾ|| ಮಾರುತಿ ಗಲ್ಲಿ, ಮಚ್ಚೆ, ಬೆಳಗಾವಿ),  ಮಹೇಶ ಬಾವುಕನ್ನಾ ಅನಗೋಳಕರ (೧೯), (ಸಾ|| ಬಸವಣಕುಡಚಿ, ತಾ & ಜಿ|| ಬೆಳಗಾವಿ),  ಆಕಾಶ ಬಾವುಕನ್ನಾ ಅನಗೋಳಕರ (೨೧), (ಸಾ|| ಬಸವಣಕುಡಚಿ, ತಾ & ಜಿ|| ಬೆಳಗಾವಿ) ಇವರನ್ನು ವಶಕ್ಕೆ ಪಡೆದುಕೊಂಡು ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ ಬೆಳಗಾವಿ ಜಿಲ್ಲೆ ಮತ್ತು ಬೆಳಗಾವಿ ನಗರದ ವಿವಿಧ ಭಾಗಗಳಿಂದ ೧೭ ಹಾಗೂ ಕಳ್ಳತನಕ್ಕೆ ಬಳಸಿದ ೧ ಮೋಟರ್ ಸೈಕಲ್ ಹೀಗೆ ಸುಮಾರು 6.50 ಲಕ್ಷ ರೂ. ಮೌಲ್ಯದ ಒಟ್ಟು ೧೮ ಮೋಟರ್ ಸೈಕಲ್‌ಗಳನ್ನು ಅವರಿಂದ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.
ವಾಹನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪಿಐ ಬೆಳಗಾವಿ ಗ್ರಾಮೀಣ ಹಾಗೂ ಅವರ ತಂಡದ ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button