ಪ್ರಗತಿವಾಹಿನಿ ಸುದ್ದಿ, ಅಗಸಗಿ : ಬೆಳಗಾವಿ ತಾಲೂಕಿನ ಬೆನ್ನಾಳಿ, ಹೊನಗಾ ಮತ್ತು ಭೂತರಾಮನಹಟ್ಟಿ ಗ್ರಾಮಗಳಿಗೆ ಅಂಟಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 4ರ ಹತ್ತಿರವಿರುವ ಅರಣ್ಯ ಪ್ರದೇಶಗಳಲ್ಲಿ ವಿಹರಿಸಲು ಬರುತ್ತಿದ್ದ ಪ್ರೇಮಿಗಳ ಜೋಡಿ ಮೇಲೆ ದಾಳಿ ನಡೆಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಖದೀಮರನ್ನು ಕಾಕತಿ ಪೊಲೀಸರು ಸೆರೆ ಹಿಡಿದು ಒಟ್ಟು 98 ಸಾವಿರ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ಕೆಂಚಪ್ಪ ನಾಯಿಕ (25) ಮತ್ತು ಬೈಲೂರ ಗ್ರಾಮದವರಾದ ಲಗಮಣ್ಣಾ ನಾಯಕ (24) – ಈ ಇಬ್ಬರು ಆರೋಪಿಗಳು ಬಂಧಿತರು.
ಈ ಘಟನೆಗೆ ಸಂಭಂದಿಸಿದಂತೆ ಪಕ್ಕದ ಸೋನಟ್ಟಿ ಗ್ರಾಮದ ಪರಾರಿಯಾಗಿರುವ ಆರೋಪಿಗಳಾದ ಬಾಳೇಶ್ ನಾಯಿಕ, ಮತ್ತು ನಾಗಪ್ಪ ಕರವಿನಕೊಪ್ಪ ಸೆರೆ ಸಿಕ್ಕ ಆರೋಪಿಗಳಿಗೆ ಸಹಕರಿಸಿದ್ದು, ಅವರಿಗಾಗಿ ಪೊಲೀಸರು ತಿವ್ರ ಶೋಧ ನಡೆಸಿದ್ದು ಶೀಘ್ರದಲ್ಲೆ ಬಂಧಿಸುವುದಾಗಿ ಕಾಕತಿ ಪಿಐ ಶ್ರೀಶೈಲ ಕೌಜಲಗಿ ತಿಳಿಸಿದರು.
ಘಟನೆ ವಿವರ
ಇದೆ ಸೆಪ್ಟೆಂಬರ್ ಭಾನುವಾರ ೨೨ ರಂದು ರಾತ್ರಿ ಎಂಟು ಗಂಟೆಗೆ ಸುಮಾರಿಗೆ ನ್ಯೊ ಗಾಂಧಿ ನಗರದ ನಿವಾಸಿ ಆಸೀಫ್ ಸೈಯ್ಯದ್ ಹಾಗೂ ಆತನ ಸಂಗಾತಿ ಜೊತೆ ವಾಯುವಿಹಾರಕ್ಕೆಂದು ಹೋದಾಗ ಈ ನಾಲ್ವರು ಆರೋಪಿಗಳು ಪ್ರೇಮಿಗಳನ್ನು ಬೆನ್ನಟ್ಟಿ ಹಲ್ಲೆ ನಡೆಸಿ ಅವರಿಂದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಭಾನುವಾರ ನಡೆದ ಘಟನೆ ಬಗ್ಗೆ ಸ್ಥಳಿಯರಿಂದ ವಿಷಯ ತಿಳಿದುಕೊಂಡ ಕಾಕತಿ ಪಿಐ
ಶ್ರೀಶೈಲ ಎಸ್. ಕೌಜಲಗಿ ಹಾಗೂ ಅವರ ತಂಡದ ಪಿಎಸ್ಐ ಎಂ.ಜಿ. ಭಜಂತ್ರಿ, ಅಡಿವೆಪ್ಪಾ.ಬಿ.ಕುಂಡೇದ, ಬಿ.ಎಸ್. ನಾಗಣ್ಣನವರ್, ಬಿ.ಸಿ. ಗುನ್ನಗೋಳ, ಸಂತೋಷ ಚಿನ್ನಣ್ಣವರ, ಎಂ.ಡಿ.ಪೂಜಾರಿ, ವೈಎಸ್ ಮರಗಟ್ಟಿ, ವಿಠ್ಠಲ್ ಪಟ್ಟೇದ, ಶ್ರೀಕಾಂತ ಉಪ್ಪಾರಟ್ಟಿ ಸೇರಿದಂತೆ ಇನ್ನಿತರರು
ಆರೋಪಿತರನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ ಎಸ್ ಲೋಕೇಶ್ ಕುಮಾರ್, ಪೊಲೀಸ್ ಉಪ ಆಯುಕ್ತೆ ಸೀಮಾ ಲಾಟ್ಕರ್, ಯಶೋಧಾ ವಂಟಗೂಡಿ, ಕೆ ಶಿವಾರೆಡ್ಡಿ ಅವರು ಕಾಕತಿ ಪೋಲಿಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ