ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ನಿಗದಿ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಅರುಣ್ ಸಿಂಗ್ ಭೇಟಿ ಬೆನ್ನಲ್ಲೇ ಒಂದೆಡೆ ವಿರೋಧಿ ಬಣಗಳು ಗೌಪ್ಯ ಸಭೆ ನಡೆಸಿದ್ದರೆ ಇನ್ನೊಂದೆಡೆ ಬಿಎಸ್ ವೈ ಆಪ್ತರು ಸಿಎಂ ಕಚೇರಿಗೆ ದೌಡಾಯಿಸಿ ಚರ್ಚೆ ನಡೆಸಿದ್ದಾರೆ.
ಶಾಸಕರಾದ ಅರುಣ್ ಕುಮಾರ್ ಪೂಜಾರ್, ಪರಣ್ಣ ಮುವಳ್ಳಿ, ಗೋಪಾಲಕೃಷ್ಣ, ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವರು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದು, ಬೆಂಬಲ ಸೂಚಿಸಿದ್ದಾರೆ.
ಇನ್ನೊಂದೆಡೆ ಶಾಸಕ ಯತ್ನಾಳ್, ಅರವಿಂದ್ ಬೆಲ್ಲದ್, ಸುನೀಲ್ ಕುಮಾರ್ ಸೇರಿದಂತೆ ಅತೃಪ್ತ ಬಣದ ನಾಯಕರು ಅರುಣ್ ಸಿಂಗ್ ರಾಜ್ಯ ಭೇಟಿಗೂ ಮೊದಲೇ ಸಭೆ ನಡೆಸಿ, ಬಳಿಕ ಅರುಣ್ ಸಿಂಗ್ ಅವರಿಗೆ ನಾಯಕತ್ವ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಬಗ್ಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಅರುಣ್ ಸಿಂಗ್ ರಾಜ್ಯ ಭೇಟಿ ಬೆನ್ನಲ್ಲೇ ಬಿಜೆಪಿ ಎರಡು ಬಣಗಳು ಸಕ್ರೀಯವಾಗಿದ್ದು, ಸಿಎಂ ಯಡಿಯೂರಪ್ಪ ಪರ-ವಿರೋಧ ತಂತ್ರಗಾರಿಕೆ ಚುರುಕುಗೊಂಡಿವೆ.
‘ಮದುಮಗನಾಗುವ ಕನಸು’; ಬೆಲ್ಲದ್ ದೆಹಲಿ ಭೇಟಿಗೆ ಆಯನೂರು ಲೇವಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ