ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಪಕ್ಷದಲ್ಲಿ ಕೆಲವರು ಸ್ವಯಂ ಘೋಷಿತ ಸಿಎಂ ಆಗಿದ್ದಾರೆ. ಕೆಲವರಿಗೆ ಅಧಿಕಾರಕ್ಕೇರುವ ಚಪಲ ಹೀಗಾಗಿ ದೆಹಲಿ ಸುತ್ತಾಡಿ ಸುದ್ದಿ ಹರಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಪ್ರವಾಸಕ್ಕೆ ಎಂಎಲ್ ಸಿ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ತಾನೇ ಸ್ವತ: ಗೆದ್ದು ಬರಬೇಕಾದರೆ ತಿಣುಕಾಡುವ ಮನುಷ್ಯ ಅರವಿಂದ್ ಬೆಲ್ಲದ್. ಈಗ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಮದುವೆ ಸೀಜನ್ ನಲ್ಲಿ ಓಲಗದ ಸದ್ದು ಕೇಳಿದಾಗ ಮದುಮಗನಾಗುವ ಆಸೆಯಾಗುತ್ತೆ. ಅರವಿಂದ್ ಬೆಲ್ಲದ್ ಎಂಬ ಮನುಷ್ಯ ಸಿಎಂ ಕನಸು ಕಾಣುತ್ತಿದ್ದಾರೆ ಕನಸು ಕಾಣುವವರಿಗೆ ಬೇಡ ಎನ್ನುವವರು ಯಾರು ಎಂದು ವ್ಯಂಗ್ಯವಾಡಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆ ಜೀವಂತವಾಗಿಡುವ ನಿಟ್ಟಿನಲ್ಲಿ ಕೆಲವರು ದೆಹಲಿಗೆ ಭೇಟಿ ನೀಡುತ್ತಾ ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ರಾಜ್ಯಕ್ಕೆ ಭೇಟಿ ನೀಡಿ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.
ಫಿಕ್ಸ್ ಆಯ್ತು ಬಿಜೆಪಿ ಕೋರ್ ಕಮಿಟಿ ಸಭೆ; ಅರುಣ್ ಸಿಂಗ್ ರಾಜ್ಯ ಭೇಟಿ ಸಂಪೂರ್ಣ ವಿವರ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ