ಅರುಣ ಜೇಟ್ಲಿ ಆರೋಗ್ಯ ಗಂಭೀರ
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ಕೇಂದ್ರದ ಮಾಜಿ ಹಣಕಾಸು ಸಚಿವ, ಬಿಜೆಪಿಯ ಹಿರಿಯ ನಾಯಕ ಅರುಣ ಜೇಟ್ಲಿ ಆರೋಗ್ಯ ತೀವ್ರ ಕ್ಷೀಣಿಸಿದೆ.
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಕಳೆದ 9ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸುಮಾರು ಒಂದು ಗಂಟೆಕಾಲ ಅವರಿಬ್ಬರೂ ಆಸ್ಪತ್ರೆಯಲ್ಲಿದ್ದು, ವೈದ್ಯರೊಂದಿಗೆ ಚರ್ಚಿಸಿದರು.
ಅಮಿತ್ ಶಾ ಇಂದು ಬೆಳಗ್ಗೆ ಕೂಡ ಪುನಃ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆ ಸುತ್ತ ಪೊಲೀಸ್ ಬಂಧೋಬಸ್ತ್ ಏರ್ಪಡಿಸಲಾಗಿದೆ.
ಅರುಣ ಜೇಟ್ಲಿ ಕಳೆದ ಸುಮಾರು 3 ವರ್ಷದಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆ ಅವರನ್ನು ಕಾಡುತ್ತಿದೆ. ಕಳೆದ ಜನವರಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸುವ ವೇಳೆಯೂ ಅವರು ಅನಾರೋಗ್ಯದಿಂದ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದ್ದರು. ಅನಾರೋಗ್ಯದಿಂದಾಗಿ 3 ತಿಂಗಳು ಜೇಟ್ಲಿ ರಜೆಯನ್ನೂ ಪಡೆದಿದ್ದರು.
ಈ ಬಾರಿ ಅವರು ಚುನಾವಣೆಗೂ ಸ್ಪರಿಧಿಸಿರಲಿಲ್ಲ. ಜೊತೆಗೆ ತಮಗೆ ಹೊಸ ಸರಕಾರದಲ್ಲಿ ಯಾವುದೇ ಜವಾಬ್ದಾರಿ ನೀಡದಂತೆ ಮನವಿ ಮಾಡಿದ್ದರು.
ಅರುಣ ಜೇಟ್ಲಿ ಬಿಜೆಪಿಗೆ ಹಾಗೂ ರಾಷ್ಟ್ರಕ್ಕೆ ದೊಡ್ಡ ಆಸ್ತಿಯಾಗಿದ್ದಾರೆ. ಲೋಕಸಭೆಯಲ್ಲಿ ಅತ್ಯಂತ ಸಮರ್ಥವಾಗಿ ಮಾತಾನಾಡಬಲ್ಲ ನಾಯಕರು ಅವರು. ಅವರು ಅನಾರೋಗ್ಯಕ್ಕೀಡಾಗಿರುವುದು ಬಿಜೆಪಿ ನಾಯಕರನ್ನು ಕಳವಳಕ್ಕೀಡು ಮಾಡಿದೆ.
ತೀವ್ರ ಅನಾರೋಗ್ಯ: ಅರುಣ ಜೇಟ್ಲಿ ಲಂಡನ್ ಆಸ್ಪತ್ರೆಗೆ
ಅರುಣ ಜೈಟ್ಲಿ, ಅಮಿತ್ ಶಾ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ