Latest

ನಿರ್ದೇಶಕ ಹಾಗೂ ಫೈಟ್ ಮಾಸ್ಟರ್ ಸೇರಿ ಮೂವರು ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ದುರಂತ ಪ್ರಕರಣ ಸಂಬಂಧ ನಿರ್ದೇಶಕ ಸೇರಿದಂತೆ ಮೂವರನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ಬಿಡದಿಯ ಜೋಗಿನಗುಡ್ಡ ಬಳಿ ಹೈ ಟೆನ್ ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಫೈಟರ್ ವಿವೇಕ್ ಸಾವನ್ನಪ್ಪಿದ್ದು, ಓರ್ವ ಕಲಾವಿದ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರೀಕರಣ ವೇಳೆ ನಿರ್ಲಕ್ಷ ವಹಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ಶಂಕರ್ ರಾಜ್, ನಿರ್ಮಾಪಕ ಗುರುದೇಶಪಾಂಡೆ ಹಾಗೂ ಫೈಟ್ ಮಾಸ್ಟರ್ ವಿನೋದ್ ಮೂವರನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.

Home add -Advt

ಹೈಟೆನ್ ಶನ್ ವಿದ್ಯುತ್ ತಂತಿಗೆ ರೋಪ್ ಹಾಕುವ ವೇಳೆ ಈ ದುರ್ಘಟನೆ ಸಂಭವಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಬಿಡದಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಶೂಟಿಂಗ್ ವೇಳೆ ಅವಘಡ: ನಟನ ದುರ್ಮರಣ

Related Articles

Back to top button