ಪ್ರಹ್ಲಾದ ಜೋಶಿಯವರನ್ನು ಹೊಗಳಿದ ರಾಜಸ್ಥಾನ್ ಮುಖ್ಯಮಂತ್ರಿ

ಪ್ರಗತಿವಾಹಿನಿ ಸುದ್ದಿ, ಜೈಪುರ/ನವದೆಹಲಿ :, ಕೇಂದ್ರ ಸಂಸದೀಯ ವ್ಯವಹಾರಗಳು ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಶ್ರೀ ಪಲ್ಲಾದ ಜೋಶಿಯವರು ರಾಜಸ್ಥಾನ ರಾಜ್ಯದ ವಿದ್ಯುತ್‌ ಸಮಸ್ಯೆ ಬಗೆಹರಿಸುವಲ್ಲಿ ರಚನಾತ್ಮಕ ಹಾಗೂ ಧನಾತ್ಮಕವಾಗಿ ಸ್ಪಂದನೆ ನೀಡಿದ್ದಾರೆಂದು ರಾಜಸ್ಥಾನ ಮುಖ್ಯಮಂತ್ರಿ  ಆಶೋಕ ಗೆಲ್ಲೋಟ್ ಅವರು ಹೇಳಿದರು.

ಅವರು ಇಂದು ಕೇಂದ್ರದ ಕೋಲ್ ಇಂಡಿಯಾ ಲಿ., ಹಾಗೂ ರಾಜಸ್ಥಾನದ ಆ‌.ಆ‌. ವಿ.ಯು.ಎನ್.ಎಲ್. ರಾಜಸ್ಥಾನ್ ವಿದ್ಯುತ್ ಉತ್ಪಾದನಾ ನಿಗಮ ಲಿ., ದೊಂದಿಗೆ 1190 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ, ಸಂಬಂಧಿ ನಡೆದ ಪರಸ್ಪರ ಒಡಂಬಡಿಕೆ ಪತ್ರಕ್ಕೆ ಅಂಕಿತ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಸ್ಥಾನದಲ್ಲಿ ವಿದ್ಯುತ್‌ ಸಮಸ್ಯೆ ಇದ್ದಾಗ ಛತ್ತೀಸ್‌ ಗಡದಲ್ಲಿರುವ ಕಲ್ಲಿದ್ದಲಿನ ಪ್ರಾಧಿಕಾರಗಳೂ ಕೂಡಾ ನೀಡಿದ ಸಹಾಯ ಸಹಕಾರವನ್ನು ಶ್ರೀ ಮೋದಿ ಸರಕಾರದ ಕೇಂದ್ರ ಕಲ್ಲಿದ್ದಲು ಸಚಿವ ಶ್ರೀ ಪಲ್ಲಾದ ಜೋಶಿ ರಾಜಸ್ಥಾನ ಸರಕಾರಕ್ಕೆ ನೀಡುತ್ತಿದ್ದಾರೆ. ರಾಜಸ್ಥಾನದ ವಿದ್ಯುತ್‌ ಬರ ನೀಗಿಸುವಲ್ಲಿ ಕೇಂದ್ರ ಸಚಿವ  ಜೋಶಿ ನಮ್ಮೊಂದಿಗೆ ಸಕಾರಾತ್ಮಕ ಸ್ಪಂದಿಸುತ್ತಿದ್ದು ನಮ್ಮ ನೆರವಿಗೆ ಸದಾ ಸಿದ್ಧವೆನ್ನುವ ಅವರ ನಡೆ ಮೆಚ್ಚುವಂತಹದ್ದೆಂದು ಕೂಡಾ  ಗಿಲ್ಲೋಟ್ ಹೇಳಿದರು. ರಾಜ್ಯಗಳು ಕಲ್ಲಿದ್ದಲು ಆಮದು ಮಾಡಿಕೊಳ್ಳುವಲ್ಲಿನ ನಿರ್ಬಂದಗಳನ್ನು ಕೇಂದ್ರ ಹಿಂಪಡೆದ ಕ್ರಮವನ್ನು ಶ್ಲಾಘಿಸಿದ ಗೆಲ್ಲೋಟ್ ಶ್ರೀ ಜೋಶಿಯವರಂತಹ ನಾಯಕರ ಧನಾತ್ಮಕ ಸ್ಪಂದನೆಯಿಂದ ಒಟ್ಟಾರೆ ಸಮಾಜದ ಕಲ್ಯಾಣಕ್ಕೆ ದಾರಿಯಂತಾಗುವುದೆಂದೂ ಮುಂತಾಗಿ ಶ್ರೀ ಜೋಶಿಯವರನ್ನು ಕೊಂಡಾಡಿದ್ದು ವಿಶೇಷ.

ಈ ತಿಳುವಳಿಕೆ ಪತ್ರಕ್ಕೆ ರಾಜಸ್ಥಾನದ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ  ರಾಜೇಶ್ ಕುಮಾರ್ ಶರ್ಮಾ, ಕೋಲ್ ಇಂಡಿಯಾ ಲಿ., ಸಂಸ್ಥೆಯ ಅಧ್ಯಕ್ಷ  ಪ್ರಮೋದ ಅಗರವಾಲ್ ಹಾಗೂ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ  ಪಲ್ಲಾದ ಜೋಶಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಲ್ಲೋಟ್ ಅವರ ಸಮ್ಮುಖದಲ್ಲಿ ಅಂಕಿತ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಜೋಶಿ ಈ ಪ್ರಸ್ತಾವಿತ ಯೋಜನೆ ರಾಜಸ್ಥಾನದ ಮುಂಬರುವ ರಾಜಸ್ಥಾನದ ಸೋಲಾರ್ ಪಾರ್ಕ್ ಯೋಜನೆಯಡಿ ಬರಲಿದ್ದು, ಇದು ಕೋಲ್ ಇಂಡಿಯಾ ಲಿ.. ನ ಸಂಕಲ್ಪಿತ ಗ್ಯಾಸಿಫಿಕೇಶನ್ ಮೂಲಕ ಪರಿಸರ ಪ್ರೇಮಿ ಪರಿಶುದ್ಧ ಸೋಲಾರ್ ವಿದ್ಯುತ್ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ದೊರಕಲಿದೆ ಎಂದರು.

ಮುಂದುವರೆದು ನಮ್ಮ ದೇಶ ಮುಂದಿನ 50 ವರ್ಷಗಳಿಗೂ ಸಾಕಾಗುವಷ್ಟು ಕಲ್ಲಿದ್ದಲು ನಿಕ್ಷೇಪ ಹೊಂದಿದ್ದು ಇದನ್ನು ಪರಿಸರ ಪ್ರೇಮಿ ಕಲ್ಲಿದ್ದಲಿನ ಬಳಕೆಯ ಉದ್ದೇಶ ಹೊಂದಲಾಗಿದೆ ಎಂದೂ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button