
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗೋಕಾಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಮಪತ್ರ ಸಲ್ಲಿಸಿದರು. ಅಭಿಮಾನಿಗಳೊಂದಿಗೆ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿ ತೆರಳಿದರು.
ಜೆಡಿಎಸ್ ಧ್ವಜ ಹಿಡಿದಿದ್ದ ಕಾರ್ಯಕರ್ತರು, ಅಶೋಕ ಪೂಜಾರಿ ಮತ್ತು ಜೆಡಿಎಸ್ ಪರ ಘೋಷಣೆ ಕೂಗಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರಲು ತಡವಾಗಿದ್ದರಿಂದ ಸಮಯ ಮೀರುವ ಹಿನ್ನೆಲೆಯಲ್ಲಿ ಪೂಜಾರಿ ನಾಮಪತ್ರ ಸಲ್ಲಿಸುವ ಕೆಲಸ ಪೂರ್ಣಗೊಳಿಸಿದರು.
ಕುಮಾರಸ್ವಾಮಿ ಈಗ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ರಸ್ತೆ ಮೂಲಕ ಗೋಕಾಕನತ್ತ ತೆರಳಿದ್ದಾರೆ. ಅಶೋಕ ಪೂಜಾರಿ ಮನೆಗೆ ತೆರಳಿ ಪ್ರಚಾರ ಕಾರ್ಯದ ಕುರಿತು ಚರ್ಚಿಸಿ ಅಲ್ಲಿಂದ ಅಥಣಿಗೆ ತೆರಳುವರು.
ಲಖನ್ ಭರ್ಜರಿ ಶಕ್ತಿ ಪ್ರದರ್ಶನ: ಸತೀಶ್ ಡಮ್ಮಿ ನಾಮಪತ್ರ
ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಮೇಶ ಜಾರಕಿಹೊಳಿ ಗೆಲುವು -ಅಂಗಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ