Kannada NewsKarnataka NewsLatest
ಲಖನ್ ಭರ್ಜರಿ ಶಕ್ತಿ ಪ್ರದರ್ಶನ: ಸತೀಶ್ ಡಮ್ಮಿ ನಾಮಪತ್ರ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಗೋಕಾಕದಲ್ಲಿ ಸೋಮವಾರ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ತ್ರಿಕೋನ ಸ್ಪರ್ಧೆಗೆ ಕರದಂಟು ನಾಡು ಸಜ್ಜಾಗಿದೆ.
ಕಾಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಆಗಮಿಸಿದ ಲಖನ್ ಸಹೋದರ ಸತೀಶ್ ಜಾರಕಿಹೊಳಿ, ಶಾಸಕಿ ಅಂಜಲಿ ನಿಂಬಾಳಕರ್ ಮತ್ತಿತರರೊಂದಿಗೆ ನಾಮಪತ್ರ ಸಲ್ಲಿಸಿದರು. ಶಾಸಕ ಸತೀಶ್ ಕೂಡ ಡಮ್ಮಿ ನಾಮಪತ್ರ ತುಂಬಿದರು.
ಈ ವೇಳೆ ಮಾತನಾಡಿದ ಸತೀಶ್, ರಮೇಶ್ ಕಾಂಗ್ರೆಸ್ ಬಿಟ್ಟು ಹೋದರೂ ಕಾರ್ಯಕರ್ತರು ಇಲ್ಲೇ ಇದ್ದಾರೆ. ಹಾಗಾಗಿ ಲಖನ್ ಜಾರಕಿಹೊಳಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ವೀರಕುಮಾರ ಪಾಟೀಲ ಮೊದಲಾದವರಿದ್ದರು.
ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಮೇಶ ಜಾರಕಿಹೊಳಿ ಗೆಲುವು -ಅಂಗಡಿ




