Latest

*ASI ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಎಎಸ್ಐ ಓರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಿವಾಜಿನಗರದ ಸಂಚಾರಿ ಎ ಎಸ್ ಐ ಸತ್ಯ ಮೃತರು. ಓವರ್ ಟೈಂ ಡ್ಯೂಟಿಯೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಎ ಎಸ್ ಐ ಹೃದಯಾಘಾತದಿಂದ ಸಾವನ್ನಪ್ಪಿದ ಬೆನ್ನಲ್ಲೇ ಸಹಸಿಬ್ಬಂದಿಯೊಬ್ಬರ ಆಡಿಯೋ ವೈರಲ್ ಆಗಿದ್ದು, 24 ಗಂಟೆಗಳ ಕಾಲ ಕೆಲಸ ಮಾಡಿ ಒತ್ತಡಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಬಂದರೆ ಮಾರನೆ ದಿನ 8 ಗಂಟೆಯವರೆಗೂ ನಿರಂತರವಾಗಿ ಡ್ಯೂಟಿ ಮಾಡಬೇಕಿತ್ತು. ಕೆಲಸ ಮಾಡದಿದ್ದರೆ ಮೆಮೊ ಕಳಿಸುತ್ತಾರೆ. ಪೊಲೀಸ್ ಇಲಾಖೆ ಹಣೆಬರಹವೇ ಇಷ್ಟು. ಸರ್ಕಾರಕ್ಕೆ ಪೊಲೀಸರ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಆಡಿಯೋ ವೈರಲ್ ಆಗಿದೆ.

ಓವರ್ ಟೈಂ ಕೆಲಸ ಮಾಡಿ ಒತ್ತಡಕೆ ಸಿಲುಕಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಗೃಹ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

Home add -Advt

*ಚಿರತೆ ದಾಳಿ: ತೀವ್ರ ಹುಡುಕಾಟಕ್ಕೆ ವಿಶೇಷ ಪಡೆ ರಚನೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cheeta-attackspecial-task-forsecm-basavaraj-bommaimysore/

Related Articles

Back to top button