Kannada NewsKarnataka News

ಬುಡಾ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-  ಶಾಸಕ ಅನಿಲ ಬೆನಕೆ ಬೆಳಗಾವಿ ನಗರದ ಆಟೋ ನಗರ, ಮಾಳ ಮಾರುತಿ ಎಕ್ಸ್‌ಟೆನಷನ್ ಹಾಗೂ ರಾಮತೀರ್ಥ ನಗರದಲ್ಲಿ ಬುಡಾ ಹಾಗೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ನಡೆಯುತ್ತಿರುವ ಅಭಿವೃಧ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

Related Articles

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಆಟೋ ನಗರ, ಮಾಳ ಮಾರುತಿ ಎಕ್ಸ್‌ಟೆನಷನ್, ಆಂಜನೆಯ ನಗರ, ಮಹಾಂತೇಶ ನಗರ ಹಾಗೂ ರಾಮತೀರ್ಥ ನಗರದಲ್ಲಿ ಬುಡಾ ಹಾಗೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಚರಂಡಿ ಸೈಕಲ್ ಟ್ರ್ಯಾಕ್, ಇಲೆಕ್ಟ್ರಿಕ್ ಮತ್ತು ವಂಟಮೂರಿಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಹಾಗೂ ಇನ್ನಿತರ ಅಭಿವೃಧ್ದಿ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಜಂಟಿಯಾಗಿ ಪರಿಶೀಲನೆ ನಡೆಸಲಾಗಿದೆ.

ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಒಳ್ಳೆಯ ರೀತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಲಹೆ ಸಹಕಾರದೊಂದಿಗೆ ಅಭಿವೃಧ್ದಿ ಕಾಮಗಾರಿಗಳ ವೇಗವನ್ನು ಹೆಚ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Home add -Advt

ಈ ಸಂದರ್ಭದಲ್ಲಿ ಶಾಕರೊಂದಿಗೆ ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಅಭಿಯಂತರ ಎ.ಎಮ್. ಬದಾಮಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳಾದ ಸಿ.ಎನ್. ಕೃಷ್ಣಮೂರ್ತಿ, ಅಭಿಷೇಕ ಮೆಂಡಿಗೇರಿ, ಬುಡಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್. ವಿ. ಹಿರೇಮಠ, ಗುತ್ತಿಗೆದಾರ ಉದಯ ಶಿವಕುಮಾರ, ಸ್ಥಳಿಯ ಮುಖಂಡರಾದ ಡಾ.ಬಾಗೋಜಿ, ಮಹಾಂತೇಶ ವಕ್ಕುಂದ ಹಾಗೂ  ಸ್ಥಳೀಯರು ಉಪಸ್ಥಿತರಿದ್ದರು

Related Articles

Back to top button