ಆಯುಷ್ಮಾನ್ ಸಂಸ್ಥೆಯಿಂದ ಸಂತ್ರಸ್ತರಿಗೆ ನೆರವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಈಗಾಗಲೇ ಬೆಳಗಾವಿ ನಗರದ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಆಯುಷ್ಮಾನ್ ತಂಡದವರು ಇದೀಗ ಜಿಲ್ಲೆಯ ಇತರೆ ತಾಲ್ಲೂಕಿನ ಬರ ಪೀಡಿತ ಪ್ರದೇಶದಲ್ಲಿ ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ.
ಭಾನುವಾರ ರಾಮದುರ್ಗ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶದ ಸಂತ್ರಸ್ತರ ನೆರವಿಗೆ ಬೆಳಗಾವಿಯ ಆಯುಷ್ಮಾನ್ ಸಂಸ್ಥೆ ಮುಂದಾಗಿದೆ. ಮುನವಳ್ಳಿಯ ಶಂಕರಲಿಂಗ ದೇವಾಲಯದಲ್ಲಿ ಭಾನುವಾರ ನೆರೆ ಸಂತ್ರಸ್ತರಿಗೆ ಹೊದಿಕೆ, ಸ್ಯಾನಿಟರಿ ಪ್ಯಾಡು, ಸ್ವೆಟರ‍್ಸ್, ಊಟದ ಪೊಟ್ಟಣ, ಟೂತ್ ಬ್ರಶ್, ಪೇಸ್ಟ್ ಬಿಸ್ಕೆಟ್ ಮತ್ತು ಹಣ್ಣುಗಳನ್ನು ಹಂಚುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದೆ.
ಆಯುಷ್ಮಾನ್ ಸಂಘದ ರೂಪಾಲಿ ರಾ. ಹೊಸಕೋಟಿ, ರಾಜೇಂದ್ರ ಹೊಸಕೋಟಿ, ರಾಜ್ ಪಾಟೀಲ, ಓಂಕಾರ, ಗಾಯಿತ್ರಿ ಇಂಗಳಗಿ, ಸ್ವಾತಿ ಮತ್ತು ಜಾಸ್ಮಂ ರೊಜಾರಿಯೋ ಅವರು ಪೂರ್ತಿ ದಿನ ಸಂತ್ರಸ್ತರ ಜತೆ ಕಳೆದರು. ಈ ಸೇವಾ ಕಾರ್ಯದಲ್ಲಿ ಆಯುಷ್ಮಾನ ಸಂಸ್ಥೆಗೆ ಮುನವಳ್ಳಿಯ ಪಂಚಲಿಂಗೇಶ್ವರ ದೇವತಾ ಜೀರ್ಣೋದ್ಧಾರ ಸೇವಾ ಸಮಿತಿಯ ೧೮ ಮಂದಿಯೂ ಈ ವೇಳೆ ಕೈ ಜೋಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ