
ಪ್ರಗತಿವಾಹಿನಿ ಸುದ್ದಿ : ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್ 4 ನ ನಾಲ್ವರೂ ಗಗನಯಾತ್ರಿಗಳು ಭೂಮಿಗೆ ಹಿಂದಿರುಗಲು ದಿನಾಂಕ ನಿಗದಿಯಾಗಿದೆ ಎಂದು ವರದಿಗಳು ಆಗಿವೆ.
ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ನಿಂದ ಜು. 14 ಕ್ಕೆ ನಾಲ್ವರೂ ಭೂಮಿಗೆ ಬಂದು ಇಳಿಯಲಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಮಾಹಿತಿ ನೀಡಿದೆ. ಈ ಕುರಿತು ಆಕ್ಸಿಯಮ್ ತನ್ನ ಅಧಿಕೃತ ಎಕ್ಸ್ ಖಾತೆಯಿ ಮೂಲಕ ಸಂದೇಶ ಹಂಚಿಕೊಂಡಿದೆ.
ಇದಕ್ಕೂ ಮುನ್ನ ಜು. 10 ರಂದು ಹಿಂದಿರುಗುವ ನಿರೀಕ್ಷೆಯಿತ್ತು. ಆದರೆ ಬಳಿಕ ಹಿಂದಿರುಗುವ ದಿನಾಂಕವನ್ನು ಬದಲಾಯಿಸಲಾಗಿತ್ತು. ಯೂರೂಪಿಯನ್ ಸ್ಪೇಸ್ ಏಜೆನ್ಸಿಯ ಸಲಹೆಯಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಲ್ಕು ದಿನಗಳ ಕಾಲ ಹೆಚ್ಚಾಗಿ ವಾಸ್ತವ್ಯ ಹೂಡಲಾಗಿದೆ.ಜೂ. 29 ರಂದು ಫ್ಲೋರಿಡಾದ ಕೆನಡಿ ಉಡಾವಣಾ ಕೇಂದ್ರದಿಂದ ಎಲ್ಲರೂ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದರು.