Latest

ಪ್ರತಿ ಧರ್ಮದ ಉಗಮದಲ್ಲಿ ಸದುದ್ದೇಶವೇ ಅಡಗಿದೆ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಜಗತ್ತಿನ ಪ್ರತಿಯೊಂದು ಧರ್ಮದ ಹುಟ್ಟಿನ ಹಿಂದೆ ಸುದ್ದೇಶವೇ ಅಡಗಿದೆ. ಆದರೆ ಆಚರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಯಾವ ಧರ್ಮೀಯರು ಮೂಲತತ್ವವನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬರುತ್ತಾರೋ ಆ ಧರ್ಮ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುತ್ತದೆ,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಹುಬ್ಬಳ್ಳಿಯಲ್ಲಿ ದಿಗಂಬರ ಜೈನರ ವಸತಿ ನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. “ಕಾಲ ಕಳೆದಂತೆ ಮೂಲತತ್ವವನ್ನು ಬಿಟ್ಟು, ಅದಕ್ಕೆ ಬೇರೆ ಬೇರೆ ಅರ್ಥಗಳನ್ನು ಜೋಡಿಸಿ ಧರ್ಮದ ಹೆಸರಿನಲ್ಲಿ ಯಾವುದನ್ನೂ ಮಾಡಬಾರದು. ಹಾಗೆ ಮಾಡಿದಲ್ಲಿ ಆ ಧರ್ಮ ಬಹಳ ದಿನ ಉಳಿಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

“ಜೈನ ಧರ್ಮದ ಮೂಲತತ್ವದ ಆಚರಣೆಯೂ ಬಹಳ ಕಷ್ಟಕರ. ಭಗವಾನ್ ಮಹಾವೀರರು ಹಾಗೂ ಎಲ್ಲ ತೀರ್ಥಂಕರರು ಬಹಳ ಕಠಿಣವಾದದ್ದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೈನ ಧರ್ಮದಲ್ಲಿ ಬಸವ, ಮಧ್ಯಮ, ಶ್ರೀಮಂತ ವರ್ಗಗಳಿದ್ದರೂ ಆಚರಣೆಯಲ್ಲಿ ಯಾವ ವ್ಯತ್ಯಾಸ, ತಾರತಮ್ಯಗಳು ಇರುವುದಿಲ್ಲ. ಧರ್ಮದ ಆಚರಣೆಯಲ್ಲಿ ನೂರಕ್ಕೆ ನೂರರಷ್ಟು ಶುದ್ಧವಾಗಿರುವುದರಿಂದ ಜೈನ ಧರ್ಮಕ್ಕೆ ಪೂಜ್ಯನೀಯ ಸ್ಥಾನ ಸಿಕ್ಕಿದೆ” ಎಂದರು.

Home add -Advt

“ಹುಬ್ಬಳ್ಳಿ ಜೈನ ಸಮುದಾಯದಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಸಮುದಾಯ ಮುಖ್ಯ ವಾಹಿನಿಗೆ ಬಂದು ಕೇವಲ ವ್ಯಾಪಾರ ವಹಿವಾಟು ಅಷ್ಟಕ್ಕೇ ಸೀಮಿತವಾಗಿರದೇ ಸಾಮಾಜಿಕ ಕಾರ್ಯದಲ್ಲೂ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಒಳ್ಳೆಯ ನಾಯಕತ್ವ ಕೂಡ ಇದೆ. ನಮ್ಮ ತಂದೆಯವರು ಈ ಸಮಾಜದೊಂದಿಗೆ ಅತ್ಯಂತ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರನ್ನು ನೆನೆದರು.

“ವೃತ್ತಿಗಳಲ್ಲಿ ಯಶಸ್ವಿಯಾಗಲು ಶಿಕ್ಷಣ ಬೇಕು. ಜೈನ ಬೋರ್ಡಿಂಗ್ ಸ್ವಾತಂತ್ರ್ಯ ಪೂರ್ವದಿಂದಲೂ ಬೆಳೆದುಬಂದಿದೆ. ಇದೀಗ ಸರ್ಕಾರದಿಂದ 50 ಲಕ್ಷ ರೂ. ಅನುದಾನ ನೀಡಿದ್ದು ನೀಡಿ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿದ್ಯಾರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಇದರ ಸದುಪಯೋಗ ಪಡೆದು ಭವಿಷ್ಯ ರೂಪಿಸಿಕೊಳ್ಳಲಿ” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಜೈನ ಸಮಾಜದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

https://pragati.taskdun.com/the-administration-of-the-state-is-based-on-sharana-tatva/
https://pragati.taskdun.com/accidental-fire-in-bus-live-combustion-of-conductor/

Related Articles

Back to top button