
ಪ್ರಗತಿವಾಹಿನಿ ಸುದ್ದಿ, ಅಥಣಿ :
ಕೃಷ್ಣಾ ನದಿಗೆ ಮಹಾರಾಷ್ಟ್ರ ನೀರು ಬಿಡದಿರುವುದನ್ನು ಮತ್ತು ಈ ವಿಷಯದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ವಿವಿಧ ಸಂಘಟನೆಗಳು ಅಥಣಿ ಬಂದ್ ನಡೆಸುತ್ತಿವೆ.

ಬಂದ್ ನಿಂದಾಗಿ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಖಾಸಗಿ ವಾಹನಗಳು ಸಹ ರಸ್ತೆಗಳಿಯದ್ದರಿಂದ ಪಟ್ಟಣ ಬಿಕೋ ಎನ್ನುತ್ತಿದೆ.

ಒಟ್ಟೂ 36 ಸಂಘಟನೆಗಳು ಬಂದ್ ಬೆಂಬಲ ಸೂಚಿಸಿದ್ದು, ಪಟ್ಟಣ ಬಹುತೇಕ ಬಂದ್ ಆಗಿದೆ. ಅಲ್ಲಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ