Kannada NewsKarnataka NewsLatest

ಸುಮ್ಮನೇ ತಿರುಗುವವರಿಗೆ ಹೊಸ ಪಾಠ ಕಲಿಸಿದ ಅಥಣಿ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಅಥಣಿ- ಅಥಣಿ ನಗರದಲ್ಲಿ  ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರಗಡೆ ತಿರುಗಾಡುವವರಿಗೆ ಲಾಠಿ ಬಿಸುವ ಬದಲು ಪೊಲೀಸರು ಹೊಸ ಪಾಠ ಕಲಿಸುತ್ತಿದ್ದಾರೆ.

ಅನಗತ್ಯ ಓಡಾಡುವವರ ಬೈಕ್ ಗಳನ್ನು ವಶಪಡಿಸಿಕೊಂಡು ಲಾಕ್ ಮಾಡಿದ್ದಾರೆ. ಸುಮ್ಮನೆ ವ್ಯರ್ಥವಾಗಿ ದ್ವಿಚಕ್ರ ವಾಹನದ ಮೇಲೆ  ತಿರುಗಾಡುವವರಿಗೆ ಪಾಠ ಕಲಿಸಲು ನಗರ ಪೊಲೀಸರು ಅವರ ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಬೈಕ್ ಗಳನ್ನು ಲಾಕ್‌ಡೌನ್ ಮುಗಿಯುವರೆಗೆ ಅವರಿಗೆ ಹಸ್ತಾಂತರಿಸದಿರಲು ನಿರ್ಧರಿಸಿದ್ದಾರೆ. ಈಗಾಗಲೇ ಸುಮಾರು 40ಕ್ಕಿಂತಲೂ ಅಧಿಕ ದ್ವಿಚಕ್ರ ವಾಹನಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button