

ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನಲ್ಲಿ ಮಂಗಳವಾರ ಸಿಡಿಲು ಬಡಿದು ಇಬ್ಬರು ಮೃತರಾಗಿದ್ದಾರೆ.
ಕಕಮರಿ ಸಮೀಪ ಕೋಹಳ್ಳಿ ದಡ್ಡಿ ಎಂಬಲ್ಲಿ ಅಮೂಲ್ ಜೈಸಿಂಗ್ ಎನ್ನುವ 24 ವರ್ಷದ ಯುವಕ ಮತ್ತು ದೇಸರಹಟ್ಟಿಯ 50ರ ಮಹಿಳೆ ವಿಠ್ಠಬಾಯಿ ಕಮಕಾರಿ ಎನ್ನುವ ಮಹಿಳೆ ಸಾವಿಗೀಡಾಗಿದ್ದಾರೆ.
ಅಮೂಲ್ ಕುರಿ ಕಾಯಿಸುತ್ತಿದ್ದಾಗ ಸಿಡಿಲು ಬಡಿದಿದೆ. ಮಹಿಳೆ ಹೊಲದಲ್ಲಿ ಅರಿಸಿನ ಬಡಿಯುತ್ತಿದ್ದಾಗ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ