
ಪ್ರಗತಿವಾಹಿನಿ ಸುದ್ದಿ, ಅಥಣಿ : ಅಥಣಿ ಮತ ಕ್ಷೇತ್ರದಿಂದ ಮುಂಬರುವ ಸಾರ್ವತ್ರಿಕ ಚುನಾವಣೆಗೆ ನಾನು ಇಲ್ಲಾ ಮಹೇಶ ಕುಮಟಳ್ಳಿ ಸ್ಪರ್ಧೆ ಮಾಡುವದು ನಿಶ್ಚಿತ ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ನಗರಥೋನದಡಿ ವಿವಿಧ ವಾರ್ಡಗಳಲ್ಲಿ ಅಭಿವೃದ್ಧಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡುತ್ತಿದ್ದರು. ಅಥಣಿ ಕ್ಷೇತ್ರದಿಂದ ಯಾರೇ ಸ್ಪರ್ಧೆ ಮಾಡಿದರು ಒಂದಾಗಿ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತವೆ. ಯಾವುದೇ ತರಹದ ಗೊಂದಲ ಬೇಡವೆಂದರು. ಇತ್ತೀಚೆಗೆ ಬೆಳಗಾವಿಗೆ ಭೇಟಿನೀಡಿದ ಕೇಂದ್ರ ಗೃಹ ಸಚಿವ ಅಮೀತ ಶಾ,ಮತ್ತು ಅಥಣಿಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷಜೀ ಬಂದು ಹೋದ ಮೇಲೆ ಬಿಜೆಪಿಯಲ್ಲಿ ಇಬ್ಬರೂ ಶಾಸಕರ ಬೆಂಬಲಿಗರ ನಡುವೆ ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಂತರಿಕ ಕದನವೆ ಏರ್ಪಟ್ಟಿತ್ತು. ಸದ್ಯ ಪಟ್ಟಣದಲ್ಲಿ ಇಬ್ಬರೂ ಸೇರಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಒಗ್ಗಟ್ಟಿನ ಮಂತ್ರ ಜಪದಿಂದ, ಕಾರ್ಯಕರ್ತರ ನಡುವಿನ ಗೊಂದಲ ನಿವಾರಣೆ ಆಯಿತಾ ಎಂಬುದು ಯಕ್ಷೇ ಪ್ರೇಶ್ನೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕುಸು ಹುಟ್ಟುವ ಮೊದಲೇ ಕುಲಾಯಿ ಹೋಲಿಸುವ ಕಾರ್ಯ ಪ್ರಾರಂಭವಾಗಿದೆ ಆದರೆ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವದು ನಿಶ್ಚಿತವೆಂದರು.
ಈ ವೇಳೆ ಶಾಸಕ ಮಹೇಶ ಕುಮಟಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ರಾಜು ಬುಲಬುಲೆ,ಅವಿನಾಶ ಜಾಧವ,ಹಣಮಂತ ಕಾಲುವೆ,ಆನಂದ ಮಾದಗುಡಿ,ಅಣ್ಣಾಸಾಬ ನಾಯಕ,ದತ್ತಾ ವಾಸ್ಟರ,ಜಯಾ ಹಡಪದ,ವೀನಯ ಪಾಟೀಲ,ಪುಟ್ಟು ಹಿರೇಮಠ ಸೇರಿದಂತೆ ಅನೇಕರಿದ್ದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರ:
ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಆ ಎರಡು ಹೇಳಿಕೆ ನೀವು ಗಮನಿಸಿರಬಹುದು, ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವ್ಯಯಕ್ತಿಕ ವಿವಾದ ಈ ವಿಚಾರಗಳು ಬಿಜೆಪಿ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧಿಸಿಲ್ಲ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ, ಸಿಬಿಐ ತನಿಖೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸವದಿ ಹೇಳಿದರು.
https://pragati.taskdun.com/lokayuktaarrestedspecial-public-prosecutor-rekha-kotegowder/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ