Kannada NewsLatestUncategorized
*ಶಾಸಕರ ನಿಧಿಯಿಂದ ಸಮುದಾಯ ಭವನ: ಚನ್ನರಾಜ ಹಟ್ಟಿಹೊಳಿಯಿಂದ ಭೂಮಿ ಪೂಜೆ*

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ನಿಪ್ಪಾಣಿ ತಾಲೂಕಿನ ಬೋಜ ಗ್ರಾಮದಲ್ಲಿ ರಾಜಮಾತಾ ಜೀಜಾವು ಮರಾಠಾ ಮಹಿಳಾ ಮಂಡಳದ ಸಮುದಾಯ ಭವನ ನಿರ್ಮಾಣಕ್ಕಾಗಿ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ (MLC Fund) ಹಣ ಮಂಜೂರು ಮಾಡಿಸಿರುವ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ಪಂಕಜ ಪಾಟೀಲ, ರಾಜೇಶ ಕದಂ, ಲಕ್ಷ್ಮಣ ಹಿಂಡೂಳ್ಕರ್, ಬಿ ಎ ಮಾನೆ, ಅಪ್ಪಾಸಾಹೇಬ್ ಪಾಟೀಲ, ಜೀವನ್ ತೋರ್ಗೊಲೆ, ಪಿರೋಜ್ ಸನದಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
*ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಏನಂದ್ರು ಲಕ್ಷ್ಮಣ ಸವದಿ?*
https://pragati.taskdun.com/athanibjp-candidatelakshmana-savadireaction/



